ವಿಧಾನಸೌಧದಲ್ಲಿ ನಡೆಯಬೇಕಿದ್ದ ವಾಲ್ಮಿಕಿ ಜಯಂತಿ ಮಳೆಯಿಂದಾಗಿ ರದ್ದುಗೊಂಡಿದೆ. ಕಾರ್ಯಕ್ರಮಕ್ಕೆ ಆಗಮಿಸದ ಸಾರ್ವಜನಿಕರು ದಿಕ್ಕಾಪಾಲಾಗಿದ್ದಾರೆ.

ಬೆಂಗಳೂರು/ಮೈಸೂರು(ಅ.05): ಮಧ್ಯಾಹ್ನ ಸಿಲಿಕಾನ್ ಸಿಟಿಯಲ್ಲಿ ಸುರಿದ ಭಾರಿ ಮಳೆಗೆ ಹಲವು ಬಡಾವಣೆಗಳು ಜಲಾವೃತಗೊಂಡಿವೆ.

ವಿಧಾನಸೌಧ, ಶಿವಾನಂದ ವೃತ್ತ, ವಿಜಯನಗರ, ಮಾಗಡಿ ರಸ್ತೆ, ಮೆಜಸ್ಟಿಕ್, ಯಶವಂತಪುರ, ರಾಜಾಜಿನಗರ, ಕೋರಮಂಗಲ,ನಾಗರಬಾವಿ,ಬಿಟಿಎಂ ಬಡಾವಣೆ, ಹೆಚ್.ಎಸ್.ಆರ್ ಬಡಾವಣೆ, ಕೆಂಗೇರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರಿ ಮಳೆ ಸುರಿದು ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ.ವಿಧಾನಸೌಧದಲ್ಲಿ ನಡೆಯಬೇಕಿದ್ದ ವಾಲ್ಮಿಕಿ ಜಯಂತಿ ಮಳೆಯಿಂದಾಗಿ ಕೆಲಕಾಲ ಸ್ಥಗಿತಗೊಂಡಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರು ದಿಕ್ಕಾಪಾಲಾಗಿದ್ದು, ರಕ್ಷಣೆಗಾಗಿ ಕುರ್ಚಿ, ಬ್ಯಾನರ್'ಗಳ ಮೋರೆ ಹೋದ ಸನ್ನಿವೇಶ ನಿರ್ಮಾಣವಾಗಿತ್ತು.

ಮೈಸೂರಿನಲ್ಲಿ ಸಿಡಿಲು ಬಡಿದು 6 ದುರ್ಮರಣ

ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ನಂದಿನಾಥಪುರ ಗ್ರಾಮದಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ 6 ಮಂದಿ ಸಾವೀಗೀಡಾಗಿದ್ದಾರೆ. ಸುಜಯ್(18) , ಸುವರ್ಣಮ್ಮ(45), ಪುಟ್ಟಣ್ಣ(60) ಹಾಗೂ ಉಳಿದ ಮೂವರ ಹೆಸರು ತಿಳಿದು ಬಂದಿಲ್ಲ. ಪಿರಿಯಾಪಟ್ಟಣ ತಾಲೂಕಿನ ಹುಣಸವಾಡಿ ಗ್ರಾಮದ ನಿವಾಸಿಗಳಾದ ಇವರು ಮಳೆಯಿಂದ ರಕ್ಷಣೆ ಪಡೆಯುವ ಸಲುವಾಗಿ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದರು. ಆದರೆ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.