ಕೆಎಲ್ಇ ಆಸ್ಪತ್ರೆಯಿಂದ ಹೊಸ ದಾಖಲೆ: ಮಹಿಳೆಯ ಹೃದಯದ ಕಸಿಯನ್ನು ಯುವಕನ ದೇಹದಲ್ಲಿ ಮರುಜೋಡನೆ

First Published 3, Mar 2018, 4:10 PM IST
Heart Transplantation Save Man Heart
Highlights

ಮಹಿಳೆಯ ಹೃದಯದ ಕಸಿಯನ್ನು ಯುವಕನ ದೇಹದಲ್ಲಿ ಮರುಜೋಡನೆ

ಬೆಳಗಾವಿ(ಮಾ.03): ಉತ್ತರ ಕರ್ನಾಟಕದಲ್ಲಿ ಮೊದಲ ಯಶಸ್ವಿ ಹೃದಯದ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಬೆಳಗಾವಿ ಕೆ.ಎಲ್.ಇ ಆಸ್ಪತ್ರೆಯಲ್ಲಿ 42 ವರ್ಷದ ಸವಿತಾ ಪವಾರ ಎಂಬ ಮಹಿಳೆಯ ಹೃದಯದ ಕಸಿಯನ್ನ 32 ವರ್ಷದ ವೀರಗೌಡ ಪಾಟೀಲ ಎಂಬ ಯುವಕನ ದೇಹದಲ್ಲಿ ಮರುಜೋಡಿಸಲಾಗಿದೆ.

ಆರ್ಥಿಕವಾಗಿ ಹಿಂದುಳಿದಿದ್ದ ವೀರಭದ್ರ ಪಾಟೀಲ ಅವರಿಗೆ ಡಾ. ರಿಚರ್ಡ್ ಸಾಲ್ಡಾನಾ ನೇತೃತ್ವದ 20 ಜನ ವೈದ್ಯಕೀಯ ತಂಡದಿಂದ ಸತತ 6 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಹೃದಯ ದಾನ ಮಾಡಿದ ಸವಿತಾ ಪವಾರ ಕುಟುಂಬ ಸದಸ್ಯರಿಗೆ ಕೆಎಲ್'ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಿಂದ ಸನ್ಮಾನಿಸಲಾಗಿದೆ.

(ಸಾಂದರ್ಭಿಕ ಚಿತ್ರ)

loader