ಪಂಜಾಬ್’ನ ಅಮೃತಸರದಲ್ಲಿ ನಡೆದ ಸಮ್ಮೇಳನದಲ್ಲಿ ಭಯೋತ್ಪಾದಕ ದೇಶದ ಪರ ಮೃದು ಧೋರಣೆ ತಾಳಿರುವ ರಾಷ್ಟ್ರಗಳು, ಪಾಕ್ ಪೋಷಿತ ಉಗ್ರ ಸಂಘಟನೆಗಳನ್ನು ಜಾಗತಿಕ ಉಗ್ರ ಸಂಘಟನೆಗಳು ಎಂದು ಘೋಷಿಸಿ ನಿರ್ಣಯ ಅಂಗೀಕರಿಸಿದೆ.
ಅಮೃತಸರ (ಡಿ.04): ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸಲು ಹಾರ್ಟ್ ಆಫ್ ಏಷ್ಯಾ ಸಮ್ಮೇಳನ ಹಿಂದೇಟು ಹಾಕಿದೆ.
ಪಾಕಿಸ್ತಾನದ ಉಗ್ರ ಚಟುವಟಿಕೆಗಳ ಬಗ್ಗೆ ಸೂಕ್ತ ದಾಖಲಾತಿಗಳನ್ನು ಭಾರತ ಒದಗಿಸಿದ್ದರೂ ಕೂಡ ಪಾಕ್’ಅನ್ನು ಉಗ್ರ ರಾಷ್ಟ್ರ ಎಂದು ಘೋಷಿಸಲು ಈ ಸಮ್ಮೇಳನ ವಿಫಲವಾಗಿದೆ.
ಪಂಜಾಬ್’ನ ಅಮೃತಸರದಲ್ಲಿ ನಡೆದ ಸಮ್ಮೇಳನದಲ್ಲಿ ಭಯೋತ್ಪಾದಕ ದೇಶದ ಪರ ಮೃದು ಧೋರಣೆ ತಾಳಿರುವ ರಾಷ್ಟ್ರಗಳು, ಪಾಕ್ ಪೋಷಿತ ಉಗ್ರ ಸಂಘಟನೆಗಳನ್ನು ಜಾಗತಿಕ ಉಗ್ರ ಸಂಘಟನೆಗಳು ಎಂದು ಘೋಷಿಸಿ ನಿರ್ಣಯ ಅಂಗೀಕರಿಸಿದೆ.
ಪಾಕ್ ನಲ್ಲಿ ನೆಲೆಸಿರುವ ಎಲ್’ಇಟಿ, ಜೈಶ್ ಇ ಮೊಹಮದ್, ಹಾಗೂ ಹಕ್ಕಾನಿ ಸಂಘಟನೆಗಳನ್ನು ಉಗ್ರ ಸಂಘಟನೆಗಳೆಂದು ಘೋಷಿಸಿದ್ದಾರೆ.
ಈ ವೇಳೆ ಮಾತನಾಡಿದ ಅರುಣ್ ಜೇಟ್ಲಿ ಭಯೋತ್ಪಾದನೆಯಲ್ಲಿ ಒಳ್ಳೆಯದು, ಕೆಟ್ಟದ್ದು ಎಂಬುವುದಿಲ್ಲ, ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ತಿಳಿಸಿದರು.