Asianet Suvarna News Asianet Suvarna News

ಎತ್ತಿನಹೊಳೆ ಯೋಜನೆ : ಪರಿಸರವಾದಿಗಳಿಗೆ ತೀವ್ರ ಹಿನ್ನೆಡೆ

. ನೀವು ಇಲ್ಲಿಗೆ ಬರುವ ಅವಶ್ಯಕತೆಯೇ ಇರಲಿಲ್ಲ. ನೀವು ಸುಪ್ರೀಂ ಕೋರ್ಟ್ ಗೆ ಹೋಗಬೇಕಿತ್ತು  ಎಂದು ಛೀಮಾರಿ ಹಾಕಿದೆ. ಒಂದೇ ನ್ಯಾಯಾಲಯದಲ್ಲಿ ಅದೇ  ವಿಷಯ ಪ್ರಶ್ನಿಸಿ ಪದೆ ಪದೆ  ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕೊಟ್ಟರೆ ಯಾವುದೇ ಯೋಜನೆ ಜಾರಿಯಾಗುವುದೇ ಇಲ್ಲ ಎಂದು ಹೇಳಿದ ನ್ಯಾಯಾಧಿಕರಣ ಪೀಠ ನಾವು ಅರ್ಜಿ ವಜಾಗೊಳಿಸಬೇಕೋ ನೀವು ಹಿಂದೆ ತೆಗೆದುಕೊಳ್ಳುತ್ತಿರೋ ಎಂದು ಪ್ರಶ್ನಿಸಿತು,

Hearing petitions Deferred March 21 Ettina Hole Scheme

ಎತ್ತಿನಹೊಳೆ ಯೋಜನೆ ಜಾರಿಗೆ ಸಂಬಂಧ ಪಟ್ಟಂತೆ ಪರಿಸರವಾದಿಗಳಿಗೆ ತೀವ್ರ ಹಿನ್ನೆಡೆಯಾಗಿದೆ.  ಕರ್ನಾಟಕ ಸರ್ಕಾರ ಕೈಗೆತ್ತಿಕೊಂಡಿರುವ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಸಿರು ನ್ಯಾಯಾಧಿಕರಣ ಅರ್ಜಿದಾರರಿಗೆ ತರಾಟೆಗೆ ತೆಗೆದುಕೊಳ್ತು.  ಚೆನ್ನೈ ಟ್ರಿಬ್ಯುನಲ್  ಪೀಠ ಕುಡಿಯುವ ನೀರಿನ ಯೋಜನೆಗೆ ಪರಿಸರ ಇಂಪ್ಯಾಕ್ಟ್  ಸರ್ವೇಕ್ಷಣೆ ಅವಶ್ಯಕತೆ ಇಲ್ಲ ಎಂದು ತೀರ್ಪು ನೀಡಿ, ಪುನರ್ ಪರಿಶೀಲನಾ ಅರ್ಜಿಯನ್ನು ವಜಾ ಗೊಳಿಸಿದೆ. ನೀವು ಇಲ್ಲಿಗೆ ಬರುವ ಅವಶ್ಯಕತೆಯೇ ಇರಲಿಲ್ಲ. ನೀವು ಸುಪ್ರೀಂ ಕೋರ್ಟ್ ಗೆ ಹೋಗಬೇಕಿತ್ತು  ಎಂದು ಛೀಮಾರಿ ಹಾಕಿದೆ. ಒಂದೇ ನ್ಯಾಯಾಲಯದಲ್ಲಿ ಅದೇ  ವಿಷಯ ಪ್ರಶ್ನಿಸಿ ಪದೆ ಪದೆ  ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕೊಟ್ಟರೆ ಯಾವುದೇ ಯೋಜನೆ ಜಾರಿಯಾಗುವುದೇ ಇಲ್ಲ ಎಂದು ಹೇಳಿದ ನ್ಯಾಯಾಧಿಕರಣ ಪೀಠ ನಾವು ಅರ್ಜಿ ವಜಾಗೊಳಿಸಬೇಕೋ ನೀವು ಹಿಂದೆ ತೆಗೆದುಕೊಳ್ಳುತ್ತಿರೋ ಎಂದು ಪ್ರಶ್ನಿಸಿತು, ಆಗ ವಕೀಲ ಪ್ರಿನ್ಸ್ ಐಸಾಕ್ ಇದು ಪಶ್ಚಿಮ ಘಟ್ಟದ ಪ್ರಶ್ನೆ ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದರದರು ಸಾಧ್ಯವಾಗದೆ ಇದ್ದಾಗ ಅರ್ಜಿಯನ್ನು ಹಿಂದೆ ತೆಗೆದುಕೊಂಡರು. ಪ್ರಕರಣ ಸಂಬಂಧ ಉಳಿದಿರುವ ಮೂರು ಅರ್ಜಿಗಳ ವಿಚಾರಣೆಯನ್ನು ಮಾರ್ಚ್ 21 ಕ್ಕೆ ಮುಂದೂಡಿದ್ದಾರೆ.

Follow Us:
Download App:
  • android
  • ios