ಮದ್ಯ ಸೇವನೆಯಿಂದ ದಣಿಕೆ, ಆಯಾಸ ಮತ್ತು ನೋವುಗಳನ್ನು ಮರೆಯಬಹುದು ಎಂದು ಗೊತ್ತು. ಆದರೆ, ಮದ್ಯ ಸೇವನೆ ಮಾನಸಿಕ ಖಿನ್ನತೆಯಿಂದ ಹೊರಬರಲು ಸಹಾಯಕವಾಗುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ. ನರವ್ಯೂಹ ಮತ್ತು ಆಣ್ವಿಕ ಅಂಶಗಳ ಮೇಲೆ ಶೀಘ್ರವೇ ಪರಿಣಾಮ ಬೀರುವ ಆಲ್ಕೊಹಾಲ್ ಮನುಷ್ಯನಲ್ಲಿನ ಖಿನ್ನತೆಯನ್ನು ಶಮನ ಮಾಡುವ ಸಾಧ್ಯತೆಯಿದೆ ಎಂದು ವೇಕ್ ರೆಸ್ಟ್ ಬ್ಯಾಪ್ಟಿಸ್ಟ್ ಮೆಡಿಕಲ್ ಸೆಂಟರ್‌ನ ಆರೆಸ್ಟ್ ಸ್ಕೂಲ್ ಮೆಡಿಸಿನ್ ಪ್ರಾಧ್ಯಾಪಕ ಕಿಂಬರ್ಲಿ ರಾಬ್ ಗ್ರಾಹಮ್ ಹೇಳಿದ್ದಾರೆ. ಆದರೆ, ಖಿನ್ನತೆಯಿಂದ ಹೊರಬರಲು ಕುಡಿತದ ದಾಸ್ಯಕ್ಕೊಳಗಾಗುವುದರಿಂದಲೂ ಸಮಸ್ಯೆ ಹೆಚ್ಚಾಗಲಿದೆ ಎಂಬ ಎಚ್ಚರಿಕೆ ಸಹ ನೀಡಲಾಗಿದೆ.