ಒಂದು ವಾರದಿಂದ ಜೀವಂತವಾಗಿದೆ ತಲೆ ಇಲ್ಲದ ಈ ಕೋಳಿ

news | Friday, March 30th, 2018
Suvarna Web Desk
Highlights

ಥೈಲ್ಯಾಂಡ್ ದೇಶದಲ್ಲಿ ಒಂದು ಅಚ್ಚರಿ ವಿದ್ಯಮಾನ ನಡೆದಿದೆ. ಇಲ್ಲಿ ತಲೆ ಇಲ್ಲದ ಕೋಳಿಯೊಂದು  ಜೀವಂತವಾಗಿ ನಡೆದಾಡುತ್ತಿದೆ.

ಥೈಲ್ಯಾಂಡ್ : ಥೈಲ್ಯಾಂಡ್ ದೇಶದಲ್ಲಿ ಒಂದು ಅಚ್ಚರಿ ವಿದ್ಯಮಾನ ನಡೆದಿದೆ. ಇಲ್ಲಿ ತಲೆ ಇಲ್ಲದ ಕೋಳಿಯೊಂದು  ಜೀವಂತವಾಗಿ ನಡೆದಾಡುತ್ತಿದೆ.  ಈ ಕೋಳಿ ತಲೆ ಕಳೆದುಕೊಂಡು ಸುಮಾರು ಒಂದು ವಾರ ಕಳೆದಿದ್ದರೂ ಕೂಡ  ಜೀವಂತವಾಗಿದೆ. ಈ ಬಗ್ಗೆ ಇಂಟರ್ನೆಟ್’ನಲ್ಲಿ ಕೋಳಿಯ ಫೊಟೊ ಸಾಕಷ್ಟು ವೈರಲ್ ಆಗುತ್ತಿದೆ.

ಈ ಕೋಳಿಗೆ ಅದರ ಕುತ್ತಿಗೆ ಮೂಲಕವೇ ಆಹಾರ ಹಾಗೂ ರೋಗ ನಿರೋಧಕ ಔಷಧಗಳನ್ನು ನೀಡಲಾಗುತ್ತಿದೆ. ಅಲ್ಲದೇ ಆಹಾರ ಸೇವನೆ ಸೇರಿದಂತೆ   ಕೋಳಿಯೂ ಬದುಕುವ ಸ್ಫೂರ್ತಿಯೊಂದಿಗೆ ಉತ್ತಮ ಪ್ರತಿಕ್ರಿಯೆ ತೋರುತ್ತಿದೆ ಎಂದು ಇದನ್ನು ಸಾಕಿದ ಅರುಣ್ ಥೋಂಗ್ ಹೇಳುತ್ತಾರೆ.

ಈ ಕೋಳಿಯ  ತಲೆಯನ್ನು ಯಾರೂ ಕೂಡ ಕತ್ತರಿಸಿಲ್ಲ. ಆದರೆ ಅದು ಹೇಗೆ  ಕತ್ತರಿಸಲ್ಪಟ್ಟಿದೆ ಎನ್ನುವುದು ತಿಳಿದಿಲ್ಲ ಎನ್ನುತ್ತಾರೆ. ಆದರೆ ಯಾವುದೋ ಪ್ರಾಣಿಯ ದಾಳಿಯಿಂದ ಹೀಗಾಗಿರಬಹುದು ಎನ್ನುತ್ತಾರೆ ಗ್ರಾಮಸ್ಥರು.

Comments 0
Add Comment

  Related Posts

  12th No Karnataka Bundh

  video | Monday, April 9th, 2018

  About No Smoking Heroine

  video | Saturday, March 24th, 2018

  Election Head Quarters with Pratap Simha

  video | Monday, March 19th, 2018

  Pratap Simha IN Election Head Quarter

  video | Monday, March 19th, 2018

  12th No Karnataka Bundh

  video | Monday, April 9th, 2018
  Suvarna Web Desk