ಬೆಂಗಳೂರು[ಆ.09]: ಹೆಚ್.ಡಿ. ಕುಮಾರಸ್ವಾಮಿ ಅವರು ಮೇ.23ರಂದು ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದಿಂದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ.
ಈ ಅಭೂತಪೂರ್ವ ಸಮಾರಂಭದಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಪ್ರಮುಖ ಗಣ್ಯಾತಿಗಣ್ಯರು ಆಗಮಿಸಿದ್ದರು. ಪ್ರಮಾಣ ವಚನ ಸಮಾರಂಭ ನಡೆದಿದ್ದು ಕೇವಲ 7 ನಿಮಿಷ ಮಾತ್ರ  ಆದರೆ ಕಾರ್ಯಕ್ರಮಕ್ಕೆ ಖರ್ಚಾಗಿದ್ದು ಒಟ್ಟು  42,89,940 ರೂ.ಗಳು. ವೆಚ್ಚವಾಗಿರುವ ಒಟ್ಟು ಹಣವನ್ನು ವಸತಿ ಇಲಾಖೆ ಈಗಾಗಲೇ ಪಾವತಿಸಿದೆ. ಇಲ್ಲೊಂದು ಕುತೂಹಲ ವಿಷಯವೆಂದರೆ ಕೊಠಡಿಗಳನ್ನು ಕಾಯ್ದಿರಿಸಿದ್ದು ಜೆಡಿಎಸ್ ಪಕ್ಷ ಆದರೆ  ಸರ್ಕಾರದಿಂದ ಹಣ ಪಾವತಿಸಲಾಗಿದೆ

ವಿಐಪಿಗಳಿಗೆಲ್ಲ ಫೈಸ್ಟಾರ್ ಹೋಟೆಲ್ ಬುಕ್ಕಿಂಗ್
ಪ್ರಮಾಣವಚನ ಸ್ವೀಕಾರಕ್ಕೆ ಬಂದ ಗಣ್ಯರಿಗೆಲ್ಲ ಫೈಸ್ಟಾರ್ ಹೋಟೆಲ್ ಬುಕ್ಕಿಂಗ್ ಮಾಡಲಾಗಿತ್ತು. ಪ್ರಮಾಣವಚನ ಹೂಗುಚ್ಛಕ್ಕೆಂದೇ 65 ಸಾವಿರ ರೂ. ಖರ್ಚಾಗಿದೆ. 

ಒಂದು ದಿನದಲ್ಲಿ ವೆಚ್ಚವಾದ ವಿವರ

ಚಂದ್ರಬಾಬು ನಾಯ್ಡು - 8,72,493 ರೂ.

ಮಾಯಾವತಿ  - 1,41,443 ರೂ.

ಅರವಿಂದ್ ಕೇಜ್ರೀವಾಲ್ : 1,85,287 ರೂ.

ಶರದ್ ಯಾದವ್ : 1,67,457 ರೂ.

ಕಮಲ್‌ಹಾಸನ್ :  1,02,400 ರೂ.

ಅಖಿಲೇಶ್ ಯಾದವ್:  1,02 000 ರೂ.

ತೇಜಿಸ್ವಿ ಯಾದವ್ : 1,02,400 ರೂ.

ಸಂಜೆ ಟೀ ಪಾರ್ಟಿ  : 4 ಲಕ್ಷ ರೂ.