ನಲಪಾಡ್-ವಿದ್ವತ್ ಪ್ರಕರಣಕ್ಕೆ ಹೆಚ್'ಡಿಕೆಯಿಂದ ಹೊಸ ಟ್ವಿಸ್ಟ್

First Published 20, Feb 2018, 8:24 PM IST
HDK Statement about Nalphad Case
Highlights

ಕೇವಲ ಕಾಲು ತಾಕಿದ್ದಕ್ಕೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಫಾಡ್ ಹಲ್ಲೆ ಮಾಡಲಿಲ್ಲ.

ಹುಬ್ಬಳ್ಳಿ(ಫೆ.20): ಮೊಹಮದ್ ನಲಪಾಡ್ ಹಾಗೂ ವಿದ್ವತ್ ಪ್ರಕರಣಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕೇವಲ ಕಾಲು ತಾಕಿದ್ದಕ್ಕೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಫಾಡ್ ಹಲ್ಲೆ ಮಾಡಲಿಲ್ಲ. ಇದರ ಹಿಂದೆ ಕೋಟ್ಯಾಂತರ ರೂಪಾಯಿಗಳ ಹಗರಣ ಇದೆ. ಕಂಪ್ಯೂಟರ್ ಹ್ಯಾಕಿಂಗ್ , ಬಿಟ್ ಕಾಯಿನ್ , ಹವಾಲಾ ದಂಧೆಯ ಕರಾಳ ಮುಖ ಇದೆ. ಕೂಡಲೇ ಪ್ರಕರಣವನ್ನು ಸೈಬರ್ ಕ್ರೈಮ್ ವಿಭಾಗದಿಂದ ತನಿಖೆ ನಡೆಸಬೇಕು. ಇದರ ಹಿಂದೆ ಇರುವ ಕರಾಳ ಸತ್ಯ ಬಹಿರಂಗವಾಗಲಿ ಈ ಪ್ರಕರಣವನ್ನು ಮುಚ್ಚಿಹಾಕುವ ಯತ್ನದಲ್ಲಿ ಇದ್ದಾರೆ. ಕಾಂಗ್ರಸ್ ನಾಯಕರ ಪುಂಡಾಟಿಕೆ ಅವರ ಮನಸ್ಥಿತಿಯನ್ನು ಬಿಂಬಿಸುತ್ತಿದೆ' ಎಂದು ತಿಳಿಸಿದರು.

loader