ಅಧಿಕಾರಿಗಳ ಜೊತೆ ಡೀಲ್ ಮಾಡುವುದು ಸಿದ್ದರಾಮಯ್ಯರಿಗೆ ಕರಗತ : ಎಚ್’ಡಿಕೆ ವಾಗ್ದಾಳಿ

HDK Slams CM Siddaramaiah
Highlights

ಡೀಲ್ ಮಾಡುವುದನ್ನು ಕುಮಾರಸ್ವಾಮಿಯಿಂದ ಕಲಿಯಬೇಕಾಗಿಲ್ಲ ಎಂದು ಹೇಳಿದ ಸಿಎಂ ಸಿದ್ದರಾಮಯ್ಯರಿಗೆ ಎಚ್’ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.  ಅಧಿಕಾರಿಗಳ ಜೊತೆ ಡೀಲ್ ಮಾಡಿಕೊಳ್ಳುವುದು ಸಿದ್ದರಾಮಯ್ಯರಿಗೆ ಕರಗತ ಎಂದು ತುಮಕೂರಿನಲ್ಲಿ ತಿರುಗೇಟು ನೀಡಿದ್ದಾರೆ.

ತುಮಕೂರು : ಡೀಲ್ ಮಾಡುವುದನ್ನು ಕುಮಾರಸ್ವಾಮಿಯಿಂದ ಕಲಿಯಬೇಕಾಗಿಲ್ಲ ಎಂದು ಹೇಳಿದ ಸಿಎಂ ಸಿದ್ದರಾಮಯ್ಯರಿಗೆ ಎಚ್’ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.  ಅಧಿಕಾರಿಗಳ ಜೊತೆ ಡೀಲ್ ಮಾಡಿಕೊಳ್ಳುವುದು ಸಿದ್ದರಾಮಯ್ಯರಿಗೆ ಕರಗತ ಎಂದು ತುಮಕೂರಿನಲ್ಲಿ ತಿರುಗೇಟು ನೀಡಿದ್ದಾರೆ.

ನಾವು ಡೀಲ್ ಮಾಡುವ ಜಾಯಮಾನದಲ್ಲಿ ಬಂದಿಲ್ಲ. ಅಧಿಕಾರಿಗಳ ಜೊತೆ ಮಾಡುವ ಡೀಲ್ ಹೇಗೆ ಮಾಡಬೇಕು, ಕಿಕ್ ಬ್ಯಾಕ್ ವ್ಯವಹಾರದಲ್ಲಿ ಹೇಗೆ ರುಜು ಹಾಕಿಸಿಕೊಳ್ಳಬೇಕು ಎನ್ನುವುದರಲ್ಲಿ ಸಿದ್ದರಾಮಯ್ಯ ಪರಿಣತಿ ಹೊಂದಿದ್ದಾರೆ ಎಂದು ವಾಕ್ ಪ್ರಹಾರ ನಡೆಸಿದರು.

ಸಿದ್ದರಾಮಯ್ಯ ಇರುವುದೇ ಈ ರಾಜ್ಯವನ್ನು ಲೂಟಿ ಮಾಡಲು ಎನ್ನುವುದು ಅಂಕಿ ಅಂಶಗಳಿಂದ ಈಗಾಗಲೇ ಸಾಬೀತಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿರುವ ಬಗ್ಗೆ ಇಂಗ್ಲೀಷ್ ನಿಯತಕಾಲಿಕೆಯೊಂದು ಬಹಿರಂಗ ಮಾಡಿದೆ. ರಾಜ್ಯದ ಬೊಕ್ಕಸವನ್ನು ದಿವಾಳಿ ಮಾಡಿ ಹೋಗುತ್ತಿದ್ದಾರೆ.  ಸಿದ್ದರಾಮಯಯ್ಯನವರ ದುರಹಂಕಾರ, ಗರ್ವ, ದುಡ್ಡಿನ ಮದ ಅವರನ್ನ  ಈ ರೀತಿ ಮಾತನಾಡಿಸುತ್ತಿದೆ ಎಂದು ಹೇಳಿದ್ದಾರೆ.

ಅಲ್ಲದೇ ನಾನು ಸಿದ್ದರಾಮಯ್ಯ ಅವರಿಗೆ ಪಾಠ ಹೇಳುವಷ್ಟು ದೊಡ್ಡ ವ್ಯಕ್ತಿಯೂ ಅಲ್ಲ . ಆರೋಗ್ಯ ಸಚಿವರೇ ಲಂಚ ತೆಗೆದುಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದರು. ಅಧಿಕಾರಿಗಳಿಗೆ ಲಂಚದ ಪಾಠ ಮಾಡಿದ್ದರು ಎಂದು ಹರಿಹಾಯ್ದಿದ್ದಾರೆ.

loader