ರಾಜ್ಯದ ಮುಖ್ಯಮಂತ್ರಿ ಆಯ್ಕೆ ಮಾಡುವುದು ಜನತೆಗೆ ಬಿಟ್ಟ ವಿಚಾರ ಎಂದು ಯಡಿಯೂರಪ್ಪಗೆ ನೇರವಾಗಿ ಕುಮಾರಸ್ವಾಮಿ ಸಡ್ಡು ಹೊಡಿದ್ದಿದ್ದಾರೆ.

ಕಾರವಾರ (ಡಿ.20): ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ, ಬಿಜೆಪಿಯೇ ಬರುವುದು ಎಂದ ತೀರಾ ಲಘುವಾಗಿ ಮಾತನಾಡಿ ಭವಿಷ್ಯ ನುಡಿಯುತ್ತಿರುವ ಯಡ್ಡಿಯೂರಪ್ಪನವರು ಜ್ಯೊತಿಷಿ ಅಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಆಯ್ಕೆ ಮಾಡುವುದು ಜನತೆಗೆ ಬಿಟ್ಟ ವಿಚಾರ ಎಂದು ಯಡಿಯೂರಪ್ಪಗೆ ನೇರವಾಗಿ ಕುಮಾರಸ್ವಾಮಿ ಸಡ್ಡು ಹೊಡಿದ್ದಿದ್ದಾರೆ.

ಇಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಹೆಚ್‌ಡಿಕೆ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅತಿ ಕೆಟ್ಟ ಸರಕಾರ ಎಂಬ ಬಿರುದು ಪಡೆದಿದೆ, ಒಂದು ವೇಳೆ ಕಾಂಗ್ರೆಸ್ ಸರಕಾರಕ್ಕೆ ಬದ್ದತೆ ಹಾಗು ರೈತರ ಬಗ್ಗೆ ಕಾಳಜಿ ಇದ್ದಲ್ಲಿ ಸಹಕಾರಿ ಸಂಘದಲ್ಲಿ ರೈತರು ಮಾಡಿದ ಸಾಲ ಮನ್ನಾ ಮಾಡಲಿಯೆಂದು ಎಂದು ರಾಜ್ಯ ಸರಕಾರಕ್ಕೆ ಕುಮಾರಸ್ವಾಮಿ ಸವಾಲೆಸೆದಿದ್ದಾರೆ.