ಅನಾರೋಗ್ಯದ ಹಿನ್ನಲೆಯಲ್ಲಿ ಹೆಚ್​ಡಿಕೆಯವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸತತ ಓಡಾಟವೇ ಇದಕ್ಕೆ ಕಾರಣ ಎಂದು ವೈದ್ಯರೂ ಕೂಡ ದೃಢಪಡಿಸಿದ್ದಾರೆ. ಅವರಿಗೆ ಸಾಕಷ್ಟು ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಿದರು.

ಬೆಂಗಳೂರು (ಏ.04): ಅನಾರೋಗ್ಯದ ಹಿನ್ನಲೆಯಲ್ಲಿ ಹೆಚ್​ಡಿಕೆಯವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸತತ ಓಡಾಟವೇ ಇದಕ್ಕೆ ಕಾರಣ ಎಂದು ವೈದ್ಯರೂ ಕೂಡ ದೃಢಪಡಿಸಿದ್ದಾರೆ. ಅವರಿಗೆ ಸಾಕಷ್ಟು ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಿದರು.

ಪ್ರಚಾರದ ಹಿನ್ನೆಲೆಯಲ್ಲಿ ಸತತ ಓಡಾಟದಿಂದ ಬಸವಳಿದು ಉಸಿರಾಟದ ತೊಂದರೆಗೊಳಗಾಗಿದ್ದ ಮಾಜಿ ಹೆಚ್​ ಡಿ ಕುಮಾರ ಸ್ವಾಮಿಯವರ ಆರೋಗ್ಯ ಈಗ ಸ್ಥಿರವಾಗಿದೆ. ಈ ಹಿಂದೆ ಚಿತ್ರದುರ್ಗ, ಮೈಸೂರು ನರಸೀ ಪುರ ಸೇರಿದಂತೆ ಹಲವು ಪ್ರದೇಶಗಳಿಗೆ ಪ್ರವಾಸ ಕೈಗೊಂಡ ಸಂಧರ್ಭದಲ್ಲಿ ಧೂಳು ಮತ್ತು ಪಟಾಕಿ ಹೊಗೆಯಿಂದ ಕೆಮ್ಮ, ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಹೀಗಾಗಿ ಕಳೆದ ಎರಡು ದಿನಗಳಿಂದ ವಿಕ್ರಮ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿಯವರ ಆರೋಗ್ಯ ವಿಚಾರಣೆಗೆ ಬಂದಿದ್ದ ಸಂಸದ ಪುಟ್ಟರಾಜು ಅವರು ಕೂಡ ಕುಮಾರ​ಸ್ವಾಮಿಯವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದರು.

ಇನ್ನು ವಿಕ್ರಂ ಅಸ್ಪತ್ರೆಯ ವೈದ್ಯ ಡಾ. ಸತೀಶ್​ ಅವರು ಕುಮಾರ ಸ್ವಾಮಿಯವರಿಗೆ ಚಿಕಿತ್ಸೆ ನೀಡುತ್ತಿದ್ದು ಕುಮಾರ ಸ್ವಾಮಿಯವರಿಗೆ ಯಾವುದೇ ತೊಂದರೆ ಇಲ್ಲ. ಮೊದಲಿಗೆ ಜ್ವರ , ಉಸಿರಾಟದ ತೊಂದರೆ ಇತ್ತು. ನಂತರ ಸ್ಕ್ಯಾನಿಂಗ್​ ಇನ್ನಿತರ ಚಿಕಿತ್ಸೆ ನಡೆಸಿದ್ದೆವು. ಅವರ ಕುಟುಂಬದವರು ಕೂಡ ಅವರ ಜೊತೆ ಇದ್ದಾರೆ. ವಿಶ್ರಾಂತಿ ಹಿನ್ನಲೆ ಅವರನ್ನ ನೋಡೋದಕ್ಕೆ ಅವರ ಸ್ನೇಹ ಬಳಗ ಬರುತ್ತಿರುವುದನ್ನ ಅವೈಡ್​ ಮಾಡೋದಕ್ಕೆ ಕುಟುಂಬದವರಿಗೆ ಸಲಹೆ ನೀಡಿದ್ದೇವೆ. ಮನೆಗೆ ಹೋದರೆ ಮತ್ತೆ ಅವರು ವಿಶ್ರಾಂತಿ ಪಡೆಯೋದಕ್ಕಾಗೋದಿಲ್ಲ. ಈ ಹಿನ್ನಲೆ ಆಸ್ಪತ್ರೆಯೇ ಎರಡು ದಿನಗಳ ಕಾಲ ವಿಶ್ರಾಂತಿಗೆ ಸೂಚಿಸಿದ್ದೇವೆ. ಈಗಾಗಲೆ ವಾರ್ಡ್​ಗೆ ಶಿಫ್ಟ್​ ಮಾಡಲಾಗಿದ್ದು . ಎರಡು ದಿನಗಳಲ್ಲಿ ಡಿಸ್ಚಾರ್ಜ್​ ಮಾಡ್ತಿವಿ ಎಂದು ಹೇಳಿದರು.