Asianet Suvarna News Asianet Suvarna News

ಎಚ್'ಡಿಕೆ ಶಂಕುಸ್ಥಾಪಿಸಿದ್ದ ಕಾಮಗಾರಿಗೆ ಸಿಎಂ ಚಾಲನೆ: ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜೆಡಿಎಸ್ ಬೆಂಬಲಿಗರು

ಕಳೆದ ಎರಡು ದಿನಗಳಿಂದ ಸಿಎಂ ಸಿದ್ರಾಮಯ್ಯ ತವರು ಜಿಲ್ಲೆ ಮೈಸೂರಲ್ಲಿ ಬೀಡು ಬಿಟ್ಟಿದ್ದರು. ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವಾಗ JDS ಪ್ರತಿಭಟನೆಯ ಬಿಸಿಯನ್ನೂ ಎದುರಿಸಬೇಕಾಯಿತು. ಇವೆಲ್ಲವನ್ನ ಲೆಕ್ಕಿಸದ ಮುಖ್ಯಮಂತ್ರಿಗಳು, ಮುಂದೆಯೂ ನಾನೇ ಸಿಎಂ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

HDK Fans Against CM Siddaramaiah
  • Facebook
  • Twitter
  • Whatsapp

ಮೈಸೂರು(ಜು.16): ಕಳೆದ ಎರಡು ದಿನಗಳಿಂದ ಸಿಎಂ ಸಿದ್ರಾಮಯ್ಯ ತವರು ಜಿಲ್ಲೆ ಮೈಸೂರಲ್ಲಿ ಬೀಡು ಬಿಟ್ಟಿದ್ದರು. ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವಾಗ JDS ಪ್ರತಿಭಟನೆಯ ಬಿಸಿಯನ್ನೂ ಎದುರಿಸಬೇಕಾಯಿತು. ಇವೆಲ್ಲವನ್ನ ಲೆಕ್ಕಿಸದ ಮುಖ್ಯಮಂತ್ರಿಗಳು, ಮುಂದೆಯೂ ನಾನೇ ಸಿಎಂ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಬೆಳಗ್ಗೆಯಿಂದ ಮುಖ್ಯಮಂತ್ರಿ ಸಿದ್ರಾಮಯ್ಯ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. ಆದರೆ ಸಾಗರಕಟ್ಟೆ ಗ್ರಾಮದಲ್ಲಿ ಸೇತುವೆ ಉದ್ಘಾಟನೆಗೆ ಆಗಮಿಸಿದಾಗ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ ಎದುರಿಸಬೇಕಾಗಿ ಬಂತು.

ಸೇತುವೆಯ ಶಿಲಾಫಲಕದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೆಸರು ಇರ್ಲಿಲ್ಲ. ಇದ್ರಿಂದ ಕೆರಳಿದ ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದ್ರು.. ಈ ಸೇತುವೆ ಕಾಮಗಾರಿಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಚಾಲನೆ ನೀಡಿದ್ದು, ಅವರ ಹೆಸರಿನ ಫಲಕ ಇಲ್ಲದಿರೋದಿಕೆ ಅಸಮಾಧಾನ ವ್ಯಕ್ತಪಡಿಸಿದರು.

KR ನಗರ ಶಾಸಕ ಸಾ.ರಾ ಮಹೇಶ್ ಕೂಡ ಪ್ರತಿಭಟನಾಕಾರರ ಮನವೊಲಿಸುವಲ್ಲಿ ವಿಫಲವಾದರು. ಕಡೆಗೆ ಜೆಡಿಎಸ್ ಸದಸ್ಯರು ಹಾಗೂ ಕಾರ್ಯಕರ್ತರ ಪ್ರತಿಭಟನೆ ನಡುವೆಯೇ ಪ್ರತಿಭಟನಾಕಾರರನ್ನ ಎಬ್ಬಿಸಿ ಸೇತುವೆಯನ್ನ ಸಿಎಂ ಉದ್ಘಾಟನೆ ಮಾಡಿದರು.

ಇದಾಬ ಬಳಿಕ ಆನಂದೂರು ಬೋರೆ ಗ್ರಾಮದಲ್ಲಿ ಮತ್ತೊಂದು ಸವಾಲು. ಮುಖ್ಯಮಂತ್ರಿಗಳ ಕಾಲೆಳೆದ ಶಾಸಕ ಜಿಟಿ ದೇವೇಗೌಡ, ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದು DCM ಆದ್ರಿ. ವರುಣಾ ಕ್ಷೇತ್ರದಿಂದ ಗೆದ್ದು CM ಅಗಿದ್ದೀರಿ. ಆದ್ರೆ, ಮುಂದಿನ ಚುನಾವಣೆ ಮಾತ್ರ ದೈವ ಇಚ್ಛೆ ಎಂದರು.

ಒಟ್ಟಿನಲ್ಲಿ ಮುಂದಿನ ಸಲ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ದರಾಮಯ್ಯ ಸಕಲ ರೀತೀಲಿ ತಯಾರಿ ನಡೆಸಿದ್ದಾರೆ.

Follow Us:
Download App:
  • android
  • ios