ಚನ್ನಪಟ್ಟಣದಿಂದ ಎಚ್’ಡಿಕೆ ಸ್ಪರ್ಧೆ?

HDK Contest From Channapattana
Highlights

ರಾಮನಗರ ಚನ್ನಪಟ್ಟಣ ಎರಡು ಕಣ್ಣು ಇದ್ದಂತೆ. ನನಗೆ ವಿಷವನ್ನಾದ್ರು ನೀಡಿ ಹಾಲನ್ನಾದ್ರು ನೀಡಿ.  ರಾಮನಗರ ಚನ್ನಪಟ್ಟಣ ಎರಡು ನಗರಗಳು ಅವಳಿ ನಗರವಾಗಬೇಕು ಎಂದು ಎಚ್’ಡಿಕೆ ಹೇಳಿದ್ದಾರೆ. 

ಬೆಂಗಳೂರು (ಏ. 03): ರಾಮನಗರ -ಚನ್ನಪಟ್ಟಣ ಎರಡು ಕಣ್ಣು ಇದ್ದಂತೆ. ನನಗೆ ವಿಷವನ್ನಾದ್ರು ನೀಡಿ ಹಾಲನ್ನಾದ್ರು ನೀಡಿ.  ರಾಮನಗರ ಚನ್ನಪಟ್ಟಣ ಎರಡು ನಗರಗಳು ಅವಳಿ ನಗರವಾಗಬೇಕು ಎಂದು ಎಚ್’ಡಿಕೆ ಹೇಳಿದ್ದಾರೆ. 

ಈ ಜಿಲ್ಲೆ ಆರ್ಥಿಕ ಅಭಿವೃದ್ಧಿಯಾಗಬೇಕು.  ಮಾವು ಮಾರುಕಟ್ಟೆ ಸೇರಿದಂತೆ ಹಲವು ಕಾರ್ಖಾನೆಗಳು ಪ್ರಾರಂಭಿಸಲು ಆದ್ಯತೆ ನೀಡಬೇಕು.  ನನಗೆ ಅಂದು ಅಡಳಿತದ ಅನುಭವ ಕಡಿಮೆ ಇತ್ತು.  ಇಂದು ಸುದೀರ್ಘ ರಾಜಕೀಯ ಅನುಭವ ನೀಡಿದೆ ಎಂದಿದ್ದಾರೆ.  

ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿ ಹೆಸರಲ್ಲಿ ಲೂಟಿ ಮಾಡ್ತಾ ಇದೆ.   10 ಪರ್ಸೆಂಟ್ ಸರ್ಕಾರ ಬೇಡ. 90 ಪರ್ಸೆಂಟ್ ಸರ್ಕಾರವೂ ಬೇಡ.  ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ.   ಮೇ 18 ರಂದು ದೇವೇಗೌಡರ ಜನ್ಮದಿನ.   ಅಂದು ದೇವೇಗೌಡರಿಗೆ ನಮ್ಮ ಸರ್ಕಾರ ನೀಡುವ ಸವಾಲು ಸ್ವೀಕರಿಸಿ ಹೊರಟಿದ್ದೇನೆ.   ಜೆಡಿಎಸ್ ಕನ್ನಡಿಗರ ಪಕ್ಷವೆಂಬ ವಿಶ್ವಾಸ ಮೂಡಿಸಲು ಹೊರಟಿದ್ದೇನೆ.  ಪಕ್ಕದ ರಾಜ್ಯಗಳಂತೆ ನಮ್ಮಲ್ಲೂ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕು.   ನಿಮ್ಮಗಳ ಪ್ರೀತಿಗೆ ತಲೆಬಾಗಲು ತೀರ್ಮಾನಿಸಿದ್ದೇನೆ.  ಅವಳಿ ನಗರವನ್ನು ಬಿಡಲು ನನಗೆ ಸಾಧ್ಯವಿಲ್ಲ.  ರಾಮನಗರ ಚನ್ನಪಟ್ಟಣ ಎರಡು ಕ್ರೇತ್ರಗಳು ಮುಖ್ಯ.  ನಿಮ್ಮಗಳ ಒತ್ತಡಕ್ಕೆ ಮಣಿದು ಸ್ಪರ್ಧಿಸಲು ನಿರ್ಧಾರಿಸಿದ್ದೇನೆ. ರಾಮನಗರ ಜನರಂತೆ ನನ್ನನ್ನು ಬೆಂಬಲಿಸಿ.   ಚನ್ನಪಟ್ಟಣದಲ್ಲಿ ಪ್ರಚಾರ ಕಾರ್ಯ ನಡೆಸಲು ಸಾಧ್ಯವಿಲ್ಲ.  ನೀವೇ ಕುಮಾರಸ್ವಾಮಿ ಎಂದು ತಿಳಿದು ಪ್ರಚಾರ ನಡೆಸಿ.  ನನಗೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವ ಗುರಿಯಿದೆ ಎನ್ನುತ್ತಾ  ಚನ್ನಪಟ್ಟಣದಿಂದ ಸ್ಪರ್ಧೆ ನಡೆಸುವ ಇರಾದೆ ವ್ಯಕ್ತಪಡಿಸಿದ್ದಾರೆ. 

loader