ಹುಣಸೂರು ಕ್ಷೇತ್ರದಿಂದ ಜಿ.ಟಿ. ದೇವೇಗೌಡರ ಕುಟುಂಬಕ್ಕೆ ಟಿಕೆಟ್​ ನೀಡುವ ವಿಚಾರವಾಗಿ ಕೆಲವರು ಸಭೆಯಲ್ಲಿ ಗೊಂದಲ ಸೃಷ್ಟಿಸಿದರು.

ಮೈಸೂರು(ಮೇ.10):ನಗರದ ಸಾರಾ ಕನ್ವೆನ್ಷನ್ ಜೆಡಿಎಸ್ ಕಾರ್ಯಕರ್ತನ ಮೇಲೆ ಜೆಡಿಎಸ್ ರಾಜ್ಯಾಧ್ಯಕ್ಷ ಹಲ್ಲೆ ಮಾಡಿದ್ದಾರೆಂದು ಇಂದು ಎಲ್ಲ ನ್ಯೂಸ್ ಚಾನೆಲ್'ಗಳಲ್ಲಿ ಸುದ್ದಿಯಾಯಿತು.ಹುಣಸೂರು ಕ್ಷೇತ್ರದಿಂದ ಜಿ.ಟಿ. ದೇವೇಗೌಡರ ಕುಟುಂಬಕ್ಕೆ ಟಿಕೆಟ್​ ನೀಡುವ ವಿಚಾರವಾಗಿ ಕೆಲವರು ಸಭೆಯಲ್ಲಿ ಗೊಂದಲ ಸೃಷ್ಟಿಸಿದರು. ಈ ವೇಳೆಯಲ್ಲಿ ಕೆಲವರಿಂದ ಕೂಗಾಟ ಕೂಡ ಉಂಟಾಯಿತು. ಈ ವೇಳೆ ಮಧ್ಯೆ ಪ್ರವೇಶಿಸಿದ ಶಾಸಕ ಸಾ.ರಾ. ಮಹೇಶ್, ಪಕ್ಷದ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ಎಲ್ಲರೂ ಬದ್ಧರಾಗಬೇಕೆಂದು ಸಲಹೆ ನೀಡಿದರು. ಸಾರಾ ಮಹೇಶ್ ಮಾತಿಗೆ ಜಿ.ಟಿ. ದೇವೇಗೌಡ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು.

ಇದರಿಂದ ಕೆಲ ಕಾಲ ಗೊಂದಲ ವಾತಾವರಣ ಸೃಷ್ಟಿಯಾಗಿತ್ತು. ಇದರಿಂದ ಸಿಟ್ಟಿಗೆದ್ದ ಕುಮಾರಸ್ವಾಮಿ ಟಿಕೆಟ್ ನೀಡುವಂತೆ ಕೂಗುತ್ತಿದ್ದ ಕಾರ್ಯಕರ್ತನ ಮೇಲೆ ಕೈ ಎತ್ತಿದರು ಎಂದು ಸುದ್ದಿಯಾಗಿತ್ತು. ಆದರೆ ವಾಸ್ತವದಲ್ಲಿ ನಡೆದದ್ದೆ ಬೇರೆ ಕಾಲಿಗೆ ಬೀಳಲು ಬಂದ ಕಾರ್ಯಕರ್ತನನ್ನು ಎತ್ತಿ ಬುದ್ಧಿ ಹೇಳಿರುವುದಾಗಿ ಕುಮಾರ ಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಕಾರ್ಯಕರ್ತ ಕೂಡ ಹೆಚ್'ಡಿಕೆ ತಮಗೆ ಕಪಾಳ ಮೋಕ್ಷ ಮಾಡಿಲ್ಲವೆಂದು ತಿಳಿಸಿದರು.