ಬೆಳಗಾವಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ 150 ಟಾರ್ಗೆಟ್​ ಸಾಧ್ಯವಿಲ್ಲ. ಇನ್ನೂ ಅಧಿಕಾರಕ್ಕೆ ಬರೋದಕ್ಕೆ ಮುಂಚಿತವಾಗಿ ಪಕ್ಷದ ನಾಯಕರಲ್ಲಿ ನಡೆಯುತ್ತಿರುವ ಆಂತರಿಕ ಕಲಹ ಕೇವಲ ರಾಜ್ಯಮಟ್ಟದಲ್ಲಿ ನಡೆಯುತ್ತಿಲ್ಲ.

ಬೆಳಗಾವಿ(ಮೇ.06): ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಬಿಜೆಪಿ ನಾಯಕರ ವಿರುದ್ಧ ಹೊಸ ಬಾಂಬ್​ ಸಿಡಿಸಿದ್ದಾರೆ. ನಾನು ಅಧಿಕಾರ ಹಸ್ತಾಂತರ ಮಾಡುವಾಗ ಯಡಿಯೂರಪ್ಪನವರಿಗೆ ಅಧಿಕಾರ ತಪ್ಪಿಸಿದ್ದೇ ಕೇಂದ್ರದ ಬಿಜೆಪಿ ನಾಯಕರು. ಈ ಸತ್ಯಾಂಶ ಜನತೆಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ 150 ಟಾರ್ಗೆಟ್​ ಸಾಧ್ಯವಿಲ್ಲ. ಇನ್ನೂ ಅಧಿಕಾರಕ್ಕೆ ಬರೋದಕ್ಕೆ ಮುಂಚಿತವಾಗಿ ಪಕ್ಷದ ನಾಯಕರಲ್ಲಿ ನಡೆಯುತ್ತಿರುವ ಆಂತರಿಕ ಕಲಹ ಕೇವಲ ರಾಜ್ಯಮಟ್ಟದಲ್ಲಿ ನಡೆಯುತ್ತಿಲ್ಲ. ಕೇಂದ್ರದ ಮಟ್ಟದಲ್ಲಿ ಇವರ ಕಲಹಕ್ಕೆ ಬೆಂಬಲ ಸಿಕ್ಕಿದೆ. ಯಡಿಯೂರಪ್ಪ ವಿರುದ್ದ ಈಶ್ವರಪ್ಪನವರನ್ನ ಎತ್ತಿ ಕಟ್ಟಿದ್ದೇ ಕೇಂದ್ರದ ಒಂದು ಗುಂಪು. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪರನ್ನ ಟಾರ್ಗೆಟ್ ಮಾಡುತ್ತಿದೆದೆ. ಎಂದು ಹೇಳಿಕೆ ನೀಡಿದ್ದಾರೆ.