ಇನ್ನೆರಡು ದಿನಗಳ ನಂತರ ಪುನೀತ್ ಅಭಿನಯದ ರಾಜಕುಮಾರ ಚಿತ್ರವನ್ನು ನೋಡುತ್ತೇನೆ

ಮೈಸೂರು(ಮೇ.22): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಂತರ ಎಲ್ಲ ರಾಜಕೀಯ ನಾಯಕರಿಗೆ ಸಿನಿಮಾ ನೋಡುವ ಪ್ರೀತಿ ಶುರುವಾಗಿದೆ. ಇಂದು ಮಾಜಿ ಪ್ರಧಾನಿ ದೇವೇಗೌಡ ಅವರು ಮೈಸೂರಿನ ಡಿ.ಆರ್.ಸಿ ಚಿತ್ರಮಂದಿರದಲ್ಲಿ ಶಿವರಾಜ್ ಕುಮಾರ್ ಅಭಿನಯದ ಬಂಗಾರು ಸನ್ ಆಫ್ ಬಂಗಾರದ ಮನುಷ್ಯ ಸಿನಿಮಾ ವೀಕ್ಷಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಮೊದಲು ರಾಜ್'ಕುಮಾರ್ ಅಭಿನಯದ ಬಂಗಾರದ ಮನುಷ್ಯ ಸಿನಿಮಾ ನೋಡಿದ್ದೆ. ಆ ಚಿತ್ರದ ಪ್ರೇರಣೆಯಿಂದ ಈ ಸಿನಿಮಾವನ್ನು ನೋಡಲು ಬಂದೆದ್ದೇನೆ'. ಇನ್ನೆರಡು ದಿನಗಳ ನಂತರ ಪುನೀತ್ ಅಭಿನಯದ ರಾಜಕುಮಾರ ಚಿತ್ರವನ್ನು ನೋಡುತ್ತೇನೆ ಎಂದು ತಿಳಿಸಿದರು.

ಗೌಡರೊಂದಿಗೆ ರೈತ ಸಂಘದ ಮುಖಂಡ ನಂಜುಂಡೇಗೌಡ, ಮೇಯರ್ ರವಿಕುಮಾರ್, ಎಂ.ಎಲ್.ಸಿ ಶ್ರೀಕಂಠೇಗೌಡ ಸಿನಿಮಾ ನೋಡಿದರು.