ಮತಯಂತ್ರದ ಬಗ್ಗೆ ಭಯ ಹುಟ್ಟಿಸುತ್ತಿರುವ ಚುನಾವಣಾ ಆಯೋಗ : ಎಚ್’ಡಿಡಿ

HDD Talk About EVM
Highlights

ಇವಿಎಂ ಯಂತ್ರ ಬೇಡ ಎನ್ನುವ ವಿಚಾರ ಸಂಬಂಧವಾಗಿದೆ ಚುನಾವಣಾ ಆಯೋಗ  ಈ ರೀತಿಯ ಭಯವನ್ನು ಯಾಕೆ ಹುಟ್ಟಿಸುತ್ತಿದೆಯೋ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.

ಹಾಸನ : ಇವಿಎಂ ಯಂತ್ರ ಬೇಡ ಎನ್ನುವ ವಿಚಾರ ಸಂಬಂಧವಾಗಿದೆ ಚುನಾವಣಾ ಆಯೋಗ  ಈ ರೀತಿಯ ಭಯವನ್ನು ಯಾಕೆ ಹುಟ್ಟಿಸುತ್ತಿದೆಯೋ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.

ವಿಶ್ವದ ಹೆಚ್ಚು ಕಡೆ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಸಲಾಗುತ್ತದೆ. ಅನೇಕ ರಾಷ್ಟ್ರಗಳಲ್ಲಿ ಇವಿಎಂ ಯಂತ್ರ ಬಳಕೆಯಾಗುತ್ತಿಲ್ಲ. ಮತ ಯಂತ್ರದಲ್ಲಿ ಅನೇಕ ಲೋಪ ದೋಷ ಇದೆ ಎನ್ನುವ ಕೂಗಿದೆ. ಆದರೂ ಆಯೋಗ ಹಠಕ್ಕೆ  ಬಿದ್ದಿರುವುದು ಸರಿಯಲ್ಲ.  ಅನುಮಾನಗಳ ಬಗ್ಗೆ ಹೇಳಿಕೊಳ್ಳುವ ಸ್ವಾತಂತ್ರ್ಯವೂ ಇಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಅರಕಲಗೋಡು  ತಾಲೂಕಿನ ಯೋಧ ಚಂದ್ರ ನಕ್ಸಲ್ ದಾಳಿಗೆ ತುತ್ತಾಗಿದ್ದು ಅವರ ಕುಟುಂಬಕ್ಕೆ  9 ಲಕ್ಷ ಪರಿಹಾರ ಪರಿಹಾರ ಬರಲಿದೆ. ಪರಿಹಾರದಲ್ಲಿ ಏರುಪೇರಾದರೆ ಸಂಸತ್ನಲ್ಲಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು. ನಮ್ಮ ಪಕ್ಷದಿಂದಲೂ ಸೂಕ್ತ ಸಹಾಯ ಒದಗಿಸಲಾಗುವುದುಎ ಎಂದು ಈ ವೇಳೆ ಹೇಳಿದರು. ಚುನಾವಣೆ ಮುಗಿದ ನಂತರ ಕೆಲ ದಿನ ಹಾಸನದಲ್ಲಿ ಇರುವುದಾಗಿಯೂ ಕೂಡ ಅವರು ಹೇಳಿದರು.

loader