ಜಿಎಸ್​ಟಿಯಿಂದ ಆಗಿರುವ ಅನಾಹುತದ ಬಗ್ಗೆ ಯೋಚಿಸಬೇಕು. ಇದರಲ್ಲಿ ಸಂಸದರಾದ ನಮ್ಮ ಕರ್ತವ್ಯ ಕೂಡ ಇದೆ. ಪ್ರಧಾನಿ ಭೇಟಿ ಮಾಡಿ ಈ ವಿಚಾರವನ್ನು ಗಮನಕ್ಕೆ ತರುತ್ತೇನೆ. ಹೋರಾಟಕ್ಕೆ ಪ್ರಸನ್ನ ಜೊತೆ ನಾನೂ ಕೂಡಾ ಕೈಜೋಡಿಸುತ್ತೇನೆ.

ಬೆಂಗಳೂರು(ಅ.18): ನಗರದ ಬಸವನಗುಡಿಯಲ್ಲಿರುವ ನಿಡುಮಾಮಿಡಿ ಮಠದಲ್ಲಿ ರಂಗಕರ್ಮಿ ಪ್ರಸನ್ನ ಅವರು ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಭೇಟಿ ಮಾಡಿ ಸತ್ಯಾಗ್ರಹ ಕೈಬಿಡಿವಂತೆ ಮನವಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೈ ಮಗ್ಗ ವಸ್ತುಗಳನ್ನು ಹಳ್ಳಿ, ನಗರ ಜನರು ಬಳಸುತ್ತಾರೆ. ಕೈ ಉತ್ಪನ್ನಗಳಿಗೆ ಜಿಎಸ್​​ಟಿ ಹಾಕಿದರೆ ಉತ್ಪಾದಕರಿಗೆ ಸಂಕಷ್ಟ. ಉತ್ಪಾದಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ. ಜಿಎಸ್​ಟಿ ಜಾರಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಭಾರೀ ಹೆಮ್ಮೆ ಇದೆ. ಜಿಎಸ್​ಟಿಯಿಂದ ಆಗಿರುವ ಅನಾಹುತದ ಬಗ್ಗೆ ಯೋಚಿಸಬೇಕು. ಇದರಲ್ಲಿ ಸಂಸದರಾದ ನಮ್ಮ ಕರ್ತವ್ಯ ಕೂಡ ಇದೆ. ಪ್ರಧಾನಿ ಭೇಟಿ ಮಾಡಿ ಈ ವಿಚಾರವನ್ನು ಗಮನಕ್ಕೆ ತರುತ್ತೇನೆ. ಹೋರಾಟಕ್ಕೆ ಪ್ರಸನ್ನ ಜೊತೆ ನಾನೂ ಕೂಡಾ ಕೈಜೋಡಿಸುತ್ತೇನೆ. ಉಪವಾಸ ಸತ್ಯಾಗ್ರಹವನ್ನು ಬಿಡುವಂತೆ ಮನವಿ ಮಾಡಿದ್ದೇನೆ. ನಾಳೆ ಸಂಜೆ ಉಪವಾಸ ಕೈ ಬಿಡುವುದಾಗಿ ಹೇಳಿದ್ದಾರೆ' ಎಂದು ತಿಳಿಸಿದ್ದಾರೆ.