ಬೆಂಗಳೂರು[ಆ.21]: ಒಂದು ವರ್ಷದ ಹಿಂದೆ ಕೊಡಗು ಪ್ರವಾಹ ಸಂತ್ರಸ್ತರಿಗೆ ಬಿಸ್ಕೆಟ್ ಎಸೆದು ಸುದ್ದಿಯಾಗಿದ್ದ ಮಾಜಿ ಸಚಿವ ರೇವಣ್ಣ, ಇದೀಗ ಮತ್ತೊಮ್ಮೆ ನಿರ್ಲಕ್ಷ್ಯದಿಂದ ಸದ್ದು ಮಾಡಿದ್ದಾರೆ. 

ಹೌದು ಗೋಕಾಕ ಪಟ್ಟಣದ ಪರಿಹಾರ ಕೇಂದ್ರದಲ್ಲಿ ಎಚ್. ಡಿ. ರೇವಣ್ಣ ಭೇಟಿ ನೀಡಿದ್ದಾರೆ. ಈ ವೇಳೆ ಸಂತ್ರಸ್ತೆಯೊಬ್ಬಳು ತನ್ನ ಅಳಲು ತೋಡಿಕೊಳ್ಳುತ್ತಿದ್ದಾಗ, ಮೇಜಿನ ಮೇಲಿದ್ದ ಬೆಲ್ ಹಿಡಿದು ಆಟವಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. 

"

ರೇವಣ್ಣರ ಈ ನಿರ್ಲಕ್ಷ್ಯವನ್ನು ಗಮನಿಸಿದ ಸಂತ್ರಸ್ತೆ ಕೊನೆಗೆ ಕೋನರೆಡ್ಡಿ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.