ಮಂಡ್ಯ [ಜು.15] : ರಾಜ್ಯ ರಾಜಕಾರಣದಲ್ಲಿ ಪ್ರಹಸನ ಮುಂದುವರಿದಿದೆ. ಇದೇ ವೇಳೆ ಹಲವು ನಾಯಕರು ಸಚಿವ ರೇವಣ್ಣ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 

ರಾಜ್ಯ ರಾಜಕೀಯದ ಹೈ ಡ್ರಾಮಾಗೆ ರೇವಣ್ಣ ಅವರೇ ಕಾರಣ. ಸಿಎಂ ಕುಮಾರಸ್ವಾಮಿ ಅವರಿಗೆ ರೇವಣ್ಣ ಶನಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಂಡ್ಯದಲ್ಲಿ ಮಾತನಾಡಿದ ಮಾಗಡಿ ಕ್ಷೇತ್ರದ ಮಾಜಿ ಶಾಸಕ ಬಾಲಕೃಷ್ಣ,  ನಾವು ಪಕ್ಷ ಬಿಟ್ಟಾಗ ರೇವಣ್ಣ ಶನಿಗಳು ತೊಲಗಿದರು ಎಂದು ಹೇಳಿದ್ದರು. ಈಗ ರಾಜ್ಯದಲ್ಲಿ ಕುಮಾರಸ್ವಾಮಿ ಅವರಿಗೆ ಯಾರು ಶನಿಯಾಗಿದ್ದಾರೆನ್ನುವುದು ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ಇದೇ ವೇಳೆ ಮಾಜಿ ಜೆಡಿಎಸ್, ಹಾಲಿ ಕೈ ನಾಯಕ ಚೆಲುವರಾಯ ಸ್ವಾಮಿ ಕೂಡ ಧ್ವನಿಗೂಡಿಸಿದ್ದು, ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಅಲ್ಲೋಲ ಕಲ್ಲೋಲಕ್ಕೆ ರೇವಣ್ಣ ಕಾರಣ ಎನ್ನಲಾಗಿದೆ.