ಬೆಂಗಳೂರು [ಜು.09]:  ಹಲವು ಶಾಸಕರು, ಸಚಿವರ ರಾಜೀನಾಮೆಯಿಂದ ಮೈತ್ರಿ ಸರ್ಕಾರದ ಭವಿಷ್ಯ ಅಳಿವು ಉಳಿವಿನ ಅಂಚಿನಲ್ಲಿದೆ. ಸರ್ಕಾರ ಉಳಿಯುತ್ತದೆಯೋ ಇಲ್ಲವೋ ಎನ್ನುವ ಚಿಂತೆಯಲ್ಲಿ ಸಿಎಂ ಕುಮಾರಸ್ವಾಮಿ ಇದ್ದರೆ ಇತ್ತ ಎಚ್.ಡಿ ರೇವಣ್ಣ ಮಾತ್ರ ನಿರಾಳವಾಗಿದ್ದಾರೆ.  

ಆದ್ರೆ ಸೂಪರ್ ಸಿಎಂ ರೇವಣ್ಣ ಮಾತ್ರ ಪ್ರಮೋಷನ್ ಮಾಡುವುದರಲ್ಲಿ ಬ್ಯುಸಿಯಲ್ಲಿದ್ದಾರೆ.  ಸುಮಾರು 700 ಮಂದಿಗೆ ಪ್ರಮೋಷನ್ ನೀಡಲು ತರಾತುರಿಯಲ್ಲಿ ತಯಾರಿ ನಡೆಸಿದ್ದಾರೆ. 

ಒಂದೊಂದು ಪ್ರಮೋಷನ್ ಗೆ 5 ಲಕ್ಷ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಆರೋಪ ಮಾಡಿದ್ದು, ಪ್ರಮೋಷನ್ ನಲ್ಲಿ ಲಿಸ್ಟ್ ಕೂಡ ಸಿದ್ಧ ಮಾಡಿದ್ದಾರೆ. ಇತ್ತೀಚೆಗಷ್ಟೇ 90 ಅಧಿಕಾರಿಗಳನ್ನು ಟ್ರಾನ್ಸ್ ಫರ್ ಮಾಡಿದ ರೇವಣ್ಣ, ಹಿಂಭಡ್ತಿ ಪಡೆದಿದ್ದವರಿಗೆ ಮುಂಭಡ್ತಿ ನೀಡಿ ಟ್ರಾನ್ಸ್ ಫರ್ ಮಾಡಿದ್ದರು.

ಈಗ ಮತ್ತೊಮ್ಮೆ ರೇವಣ್ಣ 700 ಮಂದಿಗೆ ಪ್ರಮೋಷನ್ ನೀಡಲು ತರಾತುರಿಯಲ್ಲಿ ಪಟ್ಟಿ ರೆಡಿ ಮಾಡಿದ್ದಾರೆ ಎನ್ನಲಾಗಿದೆ.