Asianet Suvarna News Asianet Suvarna News

'ಸಮ್ಮಿಶ್ರ ಸರ್ಕಾರದ ಎಲ್ಲ ಸಮಸ್ಯೆಗಳಿಗೂ ರೇವಣ್ಣ ಕಾರಣ'

ಎನ್‌. ರಾಜಣ್ಣ ಬೆನ್ನಲ್ಲೇ ರೇವಣ್ಣ ವಿರುದ್ಧ ಮತ್ತೊಬ್ಬ ನಾಯಕನಿಂದ ಕಿಡಿ| ಸಮ್ಮಿಶ್ರ ಸರ್ಕಾರದ ಎಲ್ಲಾ ಅಮಸ್ಯೆಗಳಿಗೂ ರೇವಣ್ಣ ಕಾರಣ| ಟೆಂಪಲ್‌ ರನ್ ನಡೆಸಿ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ರೇವಣ್ಣ ಫುಲ್ ಬ್ಯೂಸಿ

HD Revanna Is Responsible For Karnataka Political Crisis RR Nagar MLA Munirathna
Author
Bangalore, First Published Jul 14, 2019, 12:45 PM IST
  • Facebook
  • Twitter
  • Whatsapp

ಮುಂಬೈ[ಜು.14]: ಮೈತ್ರಿ ಸರ್ಕಾರ ಪತನದ ಹಾದಿಯಲ್ಲಿದೆ. ಮುಂಬೈ ಸೇರಿರುವ ಅತೃಪ್ತ ನಾಯಕರ ಟೀಂ ಮರಳಿ ಬರುವ ಯಾವುದೇ ಲಕ್ಷಣಗಳಿಲ್ಲ. ಹೀಗಿರುವಾಗ ರಾಜೀನಾಮೆ ಹಿಂಪಡೆಯುತ್ತೇನೆ ಎಂದು ಮೈತ್ರಿ ಸರ್ಕಾರಕ್ಕೆ ಕೊಂಚ ನೆಲಮ್ಮದಿ ನೀಡಿದ್ದ ಶಾಸಕ ಎಂಟಿಬಿ ನಾರಾಜ್ ಕೂಡಾ ಕೈ ನಾಯಕರ ಕಣ್ಣೆದುರಢೇ ಮುಂಬೈಗೆ ಹಾರಿದ್ದಾರೆ. ಅತ್ತ ಮಾಜಿ ಶಾಸಕ ಎನ್ ರಾಜಣ್ಣ ರೇವಣ್ಣ ವಿರಿದ್ಧ ಕಿಡಿ ಕಾರಿದ್ದಾರೆ. ಇಂತಹ ಗೊಂದಲಮಯ ಪರಿಸ್ಥಿತಿ ನಡುವೆಯೇ, ಕಾಂಗ್ರೆಸ್ ಶಾಸಕ ಮುನಿರತ್ನ ಕೂಡಾ ಲೋಕೋಪಯೋಗಿ ಸಚಿವ ಎಚ್. ಡಿ. ರೇವಣ್ಣ ವಿರುದ್ಧ ಕಿಡಿ ಕಾರಿದ್ದಾರೆ.

'ಅವ್ರು ರೇವಣ್ಣ ಅಲ್ಲಾ ರಾವಣ': ಅಸಮಾಧಾನ ಹೊರಹಾಕಿದ ಕೈ ನಾಯಕ!

ಹೌದು ಎನ್. ರಾಜಣ್ಣ ಬೆನ್ನಲ್ಲೇ ಇದೀಗ ಮುನಿರತ್ನ ಕೂಡಾ ಟೆಂಪಲ್ ರನ್ ನಡೆಸಿ ಸರ್ಕಾರ ಉಳಿಸಲು ಯತ್ನಿಸುತ್ತಿರುವ ಎಚ್. ಡಿ. ರೇವಣ್ಣ ವಿರುದ್ಧ ಗರಂ ಆಗಿದ್ದಾರೆ. 'ಸಮ್ಮಿಶ್ರ ಸರ್ಕಾರದ ಎಲ್ಲ ಸಮಸ್ಯೆಗಳಿಗೂ ರೇವಣ್ಣನೇ ಕಾರಣ' ಎಂದಿರುವ ಮುನಿರತ್ನ, 'ಇರೋಬರೋ ಎಲ್ಲ ಇಲಾಖೆಗಳಲ್ಲಿ ರೇವಣ್ಣ ಮೂಗು ತೂರಿಸಿದ್ರು, ಪಿಡ್ಲ್ಯುಡಿ ಇಲಾಖೆ ಬಿಟ್ಟು ಎಲ್ಲ ಇಲಾಖೆಗೆ ಕೈ ಹಾಕಿ ಗಲೀಜು ಮಾಡಿದ್ರು. ರೇವಣ್ಣ ಬಗ್ಗೆ ಸಿಎಂ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಲಿಲ್ಲ. ನಮ್ಮ ದೂರುಗಳಿಗೆ ಸಿಎಂ ಕುಮಾರಸ್ವಾಮಿ ಕಿವಿಗೊಡಲೇ ಇಲ್ಲ' ಎಂದು ಅಸಮಾಧಾನ ಪ್ರಕಟಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ಮುನಿರತ್ನ 'ಬೆಂಗಳೂರು ಅಭಿವೃದ್ಧಿಗೆ 24 ಸಾವಿರ ಕೋಟಿ ಕೊಟ್ಟಿರುವುದಾಗಿ ಸಿಎಂ ಹೇಳ್ತಿದ್ದಾರೆ. ನಮ್ಮ ಕ್ಷೇತ್ರಕ್ಕೆ ಎಷ್ಟು ಅನುದಾನ ಕೊಟ್ಟಿದ್ದಾರೆ ? ಅಭಿವೃದ್ಧಿ ಕೆಲಸ ಕುಂಠಿತವಾಗಿ ಕ್ಷೇತ್ರದ ಜನತೆಗೆ ಮುಖ ತೋರಿಸದಂತಾಗಿದೆ' ಎಂದು ದೂರಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇ ಸಂದರ್ಭದಲ್ಲಿ 'ನಾನು ಮುಂಬೈನಲ್ಲಿದ್ದೇನೆ, ಸಿನಿಮಾ ಕೆಲಸಕ್ಕೆ ಬಂದಿದ್ದೇನೆ. ಶಾಸಕರು ಇರುವ ಹೋಟೆಲ್ನಲ್ಲಿ ನಾನಿಲ್ಲ..!. ಆದರೆ ನನ್ನ ಕೆಲಸ ಮುಗಿಸಿ ಅತೃಪ್ತರನ್ನು ಭೇಟಿಯಾಗುವೆ. ನಾವು ರಾಮಲಿಂಗಾರೆಡ್ಡಿ ನಿರ್ಧಾರಕ್ಕೆ ಬದ್ಧ' ಎಂದು ಸ್ಪಷ್ಟನೆ ನೀಡಿದ್ದಾರೆ.

ಒಟ್ಟಾರೆಯಾಗಿ ಅತೃಪ್ತ ಶಾಸಕರ ಸಂಖ್ಯೆ ಹೆಚ್ಚುತ್ತಿದ್ದು, ಇದು ಮೈತ್ರಿ ಪಾಳಯಕ್ಕೆ ನುಂಗಲಾರದ ತುತ್ತಾಗಿದೆ. ಹೀಗಿದ್ದರೂ ಅಚಿವ ರೇವಣ್ಣ ಮಾತ್ರ ರಾಜ್ಯದೆಲ್ಲೆಡೆ ಟೆಂಪಲ್ ರನ್ ನಡೆಸಿ ಸರ್ಕಾರ ಉಳಿಸಿಕೊಳ್ಳುವ ಯತ್ನದಲ್ಲಿದ್ದಾರೆ. ಹೀಗಿರುವಾಗ ಮುಂದೆ ರಾಜ್ಯ ಸರ್ಕಾರದ ಭವಿಷ್ಯ ಏನಾಗುತ್ತೆ? ಕಾಲವೇ ಉತ್ತರಿಸಬೇಕಿದೆ

Follow Us:
Download App:
  • android
  • ios