ರಾಜ್ಯದ ಹಿಂದಿನ ಎಲ್ಲಾ ಮುಖ್ಯಮಂತ್ರಿಗಳು ಸುಳ್ಳುಗಾರರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಆದರೆ, ಆ ಹಿಂದಿನ ಮುಖ್ಯ ಮಂತ್ರಿಗಳು ಯಾರ್ಯಾರು ಎಂಬುದನ್ನು ತಿಳಿಸಬೇಕು. ಸ್ವಾತಂತ್ರ್ಯ ಬಂದ ನಂತರ ಆಗಿರುವ ಮುಖ್ಯಮಂತ್ರಿಗಳೆಲ್ಲಾ ಸುಳ್ಳುಗಾರರು, ತಾವೊಬ್ಬರೇ ಸತ್ಯಹರಿಶ್ಚಂದ್ರರಾ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಬೆಂಗಳೂರು: ರಾಜ್ಯದ ಹಿಂದಿನ ಎಲ್ಲಾ ಮುಖ್ಯಮಂತ್ರಿಗಳು ಸುಳ್ಳುಗಾರರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಆದರೆ, ಆ ಹಿಂದಿನ ಮುಖ್ಯ ಮಂತ್ರಿಗಳು ಯಾರ್ಯಾರು ಎಂಬುದನ್ನು ತಿಳಿಸಬೇಕು. ಸ್ವಾತಂತ್ರ್ಯ ಬಂದ ನಂತರ ಆಗಿರುವ ಮುಖ್ಯಮಂತ್ರಿಗಳೆಲ್ಲಾ ಸುಳ್ಳುಗಾರರು, ತಾವೊಬ್ಬರೇ ಸತ್ಯಹರಿಶ್ಚಂದ್ರರಾ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಜೆ.ಪಿ.ನಗರದಲ್ಲಿನ ತಮ್ಮ ನಿವಾಸದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಹುಟ್ಟಿದಾಗ ಅವರ ಹಿತ್ತಿಲಿನಲ್ಲಿ ಸತ್ಯಹರಿಶ್ಚಂದ್ರ ಬಂದು ಹೇಳಿದ್ದರಿಂದ ಸತ್ಯವನ್ನೇ ಹೇಳುತ್ತಿದ್ದಾರೆ. ಅವರಷ್ಟೇ ಸತ್ಯ ಹರಿಶ್ಚಂದ್ರ, ನಾವು ಮಾತ್ರ ಸುಳ್ಳುಗಾರರೇ ಎಂದು ವ್ಯಂಗ್ಯವಾಡಿದರು.
ಎಲ್ಲಾ ಮುಖ್ಯಮಂತ್ರಿಗಳಿಗಿಂತ ಸಿದ್ದರಾಮಯ್ಯ ಸುಳ್ಳುಗಾರರು. ಆಡಳಿತ ನಿರ್ವಹಣೆಯಲ್ಲಿ ವಿಫಲವಾಗಿದ್ದರೂ ರಾಜ್ಯ ಬೆಳವಣಿಗೆಯಾಗುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್
ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಮೀರಿಸುತ್ತಿದ್ದಾರೆ ಎಂದು ಹಾಲಿ ಸಂಸದ ವೀರಪ್ಪ ಮೊಯ್ಲಿ ಹೆಸರನ್ನು ಪ್ರಸ್ತಾಪಿಸದೇ ಟೀಕಿಸಿದರು.
