ಬಾಗಲಕೋಟೆ :  ನನ್ನ ಮೇಲೆ ಅನುಮಾನ ಪಡಬೇಡಿ ಮತ್ತು ಅಪ ನಂಬಿಕೆಯನ್ನು ಇಡಬೇಡಿ. ಇರುವ ಒಬ್ಬ ಮಗನ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ನಿಮ್ಮ ಸಾಲ ಮನ್ನಾ ಯೋಜನೆಯನ್ನು ಸಂಪೂರ್ಣ ವಾಗಿ ಪೂರ್ಣಗೊಳಿಸಿಯೇ ತೀರುತ್ತೇನೆ ಎಂದು ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಭಾವುಕರಾಗಿ ಹೇಳಿದ್ದಾರೆ. 

ನಗರದ ಕಲಾಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಸಹಕಾರ ಇಲಾಖೆ, ಬಿಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ರೈತರ ಬೆಳೆ ಸಾಲ ಮನ್ನಾ ಯೋಜನೆಯಡಿ ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಸರ್ಕಾರ ಯಾವ ಕಾರಣಕ್ಕೂ ಬೀಳು ವುದಿಲ್ಲ. ರೈತರ ಸಾಲಮನ್ನಾ ಯೋಜ ನೆಯನ್ನು ಪೂರ್ಣಗೊಳಿಸಿಯೇ ಅಧಿ ಕಾರದಿಂದ ನಿರ್ಗಮಿಸುತ್ತೇನೆ. ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಈ ಸರ್ಕಾರ ವನ್ನು ಉಳಿಸಿಕೊಳ್ಳುತ್ತೇನೆ. ಭಯ ಬೇಡ. ಸಾಲಮನ್ನಾ ಮಾಡುವ ಸಲು ವಾಗಿಯೇ ಮುಂದಿನ ಬಜೆಟ್‌ನಲ್ಲಿ 20 ಸಾವಿರ ಕೋಟಿ ಮೀಸಲಿಡುತ್ತೇನೆ ಎಂದರು.

ನಾಲ್ಕು ಹಂತದಲ್ಲಿ ಸಾಲ ಮನ್ನಾ ಯೋಜನೆ ಪೂರ್ಣಗೊಳಿಸುವ ಇಚ್ಚಾಶಕ್ತಿ ನನ್ನದಾಗಿದ್ದು, ಬರುವ ಬಜೆಟ್‌ನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮರುಪಾವತಿಗಾಗಿಯೆ 20 ಸಾವಿರ ಕೋಟಿ ಹಣವನ್ನು ಕಾಯ್ದಿರಿಸುತ್ತೇನೆ. ಇದು ನಾನು ರೈತರಿಗೆ ಕೊಡುವ ವಾಗ್ದಾನ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯ ಬಜೆಟ್ ಮಂಡಿಸುವ ಅಗತ್ಯ ಇರುವುದರಿಂದ ಫೆಬ್ರುವರಿಯಲ್ಲಿಯೆ ಬಜೆಟ್ ಮಂಡಿಸುವುದಾಗಿ ತಿಳಿಸಿದರು.

ಬರುವ ಮಾರ್ಚ್- 31 ರ ಒಳಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದ ರೈತರ 2 ಲಕ್ಷ ಒಳಗಿನ  ಸಾಲದಲ್ಲಿ ಕನಿಷ್ಠ50,000 ಹಣವನ್ನು ಅವರ ಅಕೌಂಟ್‌ಗೆ ಹಣವನ್ನು ಬಡ್ಡಿ ಸಮೇತ ಸರ್ಕಾರ ಜಮಾ ಮಾಡುತ್ತದೆ. ಇನ್ನುಳಿದ ಸಾಲದ ಹಣ ಮತ್ತು ಬಡ್ಡಿಯನ್ನು ಬರುವ ಅವಧಿಯಲ್ಲಿ ಸರ್ಕಾರವೇ ಪಾವತಿಸುತ್ತದೆ. ಈ ಕುರಿತು ಪ್ರತಿ ರೈತನಿಗೆ ಮಾಹಿತಿಯನ್ನು ಮನೆ ಬಾಗಿಲಿಗೆ ತಲುಪಿಸುವ ಹೊಣೆ ಸರ್ಕಾರದ್ದು ಎಂದು ಭರವಸೆ ನೀಡಿದರು.

ಬ್ಯಾಂಕ್ ಕಿರುಕುಳಕ್ಕೆ ಬಗ್ಗಬೇಡಿ: ಸಾಲ ವನ್ನಾ ವಿಷಯದಲ್ಲಿ ಸರ್ಕಾರದ ನಿಲುವು ಸ್ಪಷ್ಟವಿದ್ದರೂ ಕೆಲವು ರಾಷ್ಟ್ರೀಕೃತ ಬ್ಯಾಂಕ್‌ಗಳು ವರ್ತಿಸುತ್ತಿರುವ ರೀತಿ ನೋಡಿದರೆ ಒಂದು ರೀತಿಯಲ್ಲಿ ಕಳ್ಳಾಟ ನಡೆಸುತ್ತಿವೆ ಎಂದು ನನಗೆ ಅನಿಸುತ್ತಿದೆ ಎಂದು ಹೇಳಿದ ಸಿಎಂ, ಇತ್ತೀಚೆಗೆ ಗದಗ ಜಿಲ್ಲೆಯ ರೈತ ಕುಟುಂಬದ ಮೇಲಿನ ನೋಟಿಸ್ ಮತ್ತು ಅದರ ನಂತರ ಗದಗ ಜಿಲ್ಲಾಡಳಿತಕ್ಕೆ ನಾನು ಸೂಚಿಸಿದ ನಂತರ ಬ್ಯಾಂಕ್ ಅಧಿಕಾರಿಗಳ ವರ್ತನೆಯೇ ಉದಾಹರಣೆ ಎಂದರು.

ರೈತರು ಯಾವುದೇ ಕಾರಣಕ್ಕೂ ರಾಷ್ಟ್ರೀಕೃತ ಬ್ಯಾಂಕುಗಳ ಕಿರುಕುಳಕ್ಕೆ ಬಗ್ಗದೆ ನಮ್ಮ ಜೊತೆ ಕೈಜೋಡಿಸಿ ನೋಟಿಸ್‌ನಂತಹ ಬೆದರಿಕೆಗಳು ನಿಮಗೆ ಬಂದರೆ ಜಿಲ್ಲಾಡಳಿತದ ಗಮನಕ್ಕೆ ತನ್ನಿ. ಗಾಬರಿಯಾಗಬೇಡಿ ಎಂದು ರೈತರಲ್ಲಿ ಆತ್ಮಸ್ಥೈರ್ಯ ತುಂಬಿದರು. ಸಾಂಕೇತಿಕವಾಗಿ ರೈತರ ಋಣ ಮುಕ್ತ ಪ್ರಮಾಣ ಪತ್ರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲೆಯ 6 ತಾಲೂಕುಗಳಲ್ಲಿ ಆಯ್ದ ತಲಾ ೫ ಜನ ರೈತರಿಗೆ ವೇದಿಕೆಯಲ್ಲಿ ವಿತರಿಸಿದರು.