Asianet Suvarna News Asianet Suvarna News

ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ : ಸಿಎಂ ಕುರ್ಚಿಗೆ ಕಂಟಕ

ಮುಖ್ಯಮಂತ್ರಿ ಕುಮಾರಸ್ವಾಮಿಗೆ ರಾಜಕೀಯದಲ್ಲಿ ಕಂಟಕ ಕಾದಿದೆ. ಅವರು ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ  ಇದೆ ಎಂದು ಜ್ಯೋತಿಷಿಯೋರ್ವರು ಭವಿಷ್ಯ ನುಡಿದಿದ್ದಾರೆ. 

HD Kumaraswamy Likely To Lost CM Post Says Astrologer
Author
Bengaluru, First Published Jul 28, 2018, 9:27 AM IST

ಬೆಂಗಳೂರು :  ಈ ಶತಮಾನದ ಅತಿ ದೀರ್ಘ ಚಂದ್ರಗ್ರಹಣ ರಾಜ್ಯ ರಾಜಕೀಯದ ಮೇಲೂ ಪರಿಣಾಮ ಬೀರಲಿದ್ದು, ಮುಖ್ಯಮಂತ್ರಿ ಎಚ್.ಡಿ.  ಕುಮಾರಸ್ವಾಮಿ ಅವರ ಕುರ್ಚಿ ಅಲುಗಾಡುವ ಅಥವಾ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. 

ಈ ವಿಶೇಷ ಗ್ರಹಣದ ಬಗ್ಗೆ ಶುಕ್ರವಾರ ಮಾತನಾಡಿರುವ ಮಡಿಕೇರಿ ಶ್ರೀ ವಿಜಯ ವಿನಾಯಕ ದೇವಾಲಯದ ಅರ್ಚಕರೂ ಹಾಗೂ  ಜ್ಯೋತಿಷಿಗಳಾದ ಕೃಷ್ಣ ಉಪಾಧ್ಯ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕಂಟಕ ಕಾದಿದೆ ಎಂದು ಎಚ್ಚರಿಸಿದ್ದಾರೆ. ಈ ಗ್ರಹಣವು ದೇಶದ ಆರ್ಥಿಕ, ರಾಜಕೀಯ ವ್ಯವಸ್ಥೆ ಮೇಲೆ ಪರಿಣಾಮ ಬೀಳುತ್ತದೆ. ಹಾಗೆಯೇ ಬೆಳೆಗಳ ಮೇಲೆ ಕೂಡಾ ಇದರ ಪರಿಣಾಮ ಉಂಟಾಗಲಿದೆ. 

ಅಲ್ಲದೆ, ರಾಜ್ಯದ  ದೊರೆಯೊಬ್ಬರು ಭಾಗಮಂಡಲವನ್ನು ದಾಟಿ ತಲಕಾವೇರಿಗೆ ಭೇಟಿ ನೀಡಿದ್ದು ಒಳ್ಳೆಯ ಲಕ್ಷಣವಲ್ಲ. ಇದರಿಂದ ಅಂಥವರಲ್ಲಿ ಆರೋಗ್ಯ ಸಮಸ್ಯೆ ಕಾಡುವ ಅಪಾಯವಿದೆ. ಜತೆಗೆ, ರಾಜಕೀಯವಾಗಿ ಅಧಿಕಾರ ಕಳೆದುಕೊಳ್ಳುವ ಸಂಭವವಿದೆ ಎಂದು ಕೃಷ್ಣ ಉಪಾಧ್ಯ ಅವರು ನುಡಿದಿದ್ದಾರೆ. ಕುಮಾರಸ್ವಾಮಿ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದು ಸ್ವಾಗತಾರ್ಹ. ಆದರೆ ಅವರು ಭಾಗಮಂಡಲವನ್ನು ದಾಟಿ ತಲಕಾವೇರಿಗೆ ಭೇಟಿ ನೀಡಿರುವುದು ಅವರ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಕೊಡಗಿನ ಜನ ತಮ್ಮ ಪಿತೃಗಳಿಗೆ ಪಿಂಡ ಪ್ರದಾನ ಮಾಡುವ ಸ್ಥಳ ಎಂದಿದ್ದಾರೆ.

Follow Us:
Download App:
  • android
  • ios