ಯಾದಗಿರಿ[ಜೂ. 21] ಬೆಳಗ್ಗೆ ಕೆಎಸ್ ಆರ್ ಟಿಸಿ ಬಸ್ ನಲ್ಲಿ ತೆರಳಿದ ಕುಮಾರಸ್ವಾಮಿ ಇಡೀ ದಿನ ಜನರ ಅಹವಾಲು ಸ್ವೀಕರಿಸಿದರು. ಯಾದಗಿರಿಯ ಚಂಡ್ರಕಿ ಗ್ರಾಮದಲ್ಲಿಯೇ ಕುಳಿತು ಸಿಎಂ ಅನೇಕ ಕೊಡುಗೆಗಳನ್ನು ನೀಡಿದರು.

ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಪ್ರಮುಖ ನಿರ್ಧಾರಗಳು

1.ಚಂಡ್ರಕಿ ಗ್ರಾಮಕ್ಕೆ ಸಂಪರ್ಕ ರಸ್ತೆ ಕಲ್ಪಿಸಲು ಎಚ್‍ಕೆಆರ್‍ಡಿಬಿ ವತಿಯಿಂದ 25 ಲಕ್ಷ ರೂ. ಬಿಡುಗಡೆ.
2.ಚಂಡ್ರಕಿ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ 1.50 ಕೋಟಿ ರೂ. 
3.ಚಂಡ್ರಕಿಯ ಎಲ್ಲಾ ಶಾಲೆಗಳ ದುರಸ್ತಿಗೆ ಕ್ರಮ
4.ಚಂಡ್ರಕಿ ಸೇರಿದಂತೆ ಗುರುಮಠಕಲ್ ತಾಲೂಕಿನ 32 ಗ್ರಾಮಗಳಿಗೆ ಭೀಮಾ ನದಿಯಿಂದ ಕುಡಿಯುವ ನೀರು ಕಲ್ಪಿಸುವ ಯೋಜನೆಗೆ ಚಾಲನೆ
5.ಚಂಡ್ರಕಿ ಗ್ರಾಮ ಸಂತೆ ಅಭಿವೃದ್ಧಿಗೆ 1 ಕೋಟಿ ರೂ. 

ಸಿಎಂ ಗ್ರಾಮ ವಾಸ್ತವ್ಯದಲ್ಲೂ ಕಾಂಗ್ರೆಸ್ ನಾಯಕರಿಗೆ ಜಾಗವಿಲ್ಲ..!

ಯಾದಗಿರಿ ಜಿಲ್ಲೆಗೆ ಸಂಬಂಧಿಸಿದ  ತೀರ್ಮಾನಗಳು
1.ಯಾದಗಿರಿ ಜಿಲ್ಲಾ ಆಸ್ಪತ್ರೆಯನ್ನು 100 ಬೆಡ್‍ನಿಂದ 300 ಬೆಡ್‍ಗೆ ಪರಿವರ್ತಿಸಲು ನಿರ್ದೇಶನ
2.ಯಾದಗಿರಿ ಜಿಲ್ಲಾ ಆಸ್ಪತೆಗೆ ಸಂಪರ್ಕ ರಸ್ತೆ ಕಲ್ಪಿಸಲು 1.5 ಕೋಟಿ ರೂ. ಬಿಡುಗಡೆ
3.ಕಡೇಚೂರು- ಬಾಡಿಯಾಳ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ ತಕ್ಷಣ ಕ್ರಮ
4.ಯಾದಗಿರಿ ನಗರದದಲ್ಲಿ ಅಪೂರ್ಣವಾಗಿರುವ ಯುಜಿಡಿ ಕಾಮಗಾರಿಗೆ ತ್ವರಿತ ಚಾಲನೆ
5.ಯಾದಗಿರಿ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಪ್ರತಿ ಹಳ್ಳಿಗೆ ಜಲಧಾರೆ ಯೋಜನೆಯಡಿ ನದಿಯ ಮೂಲದಿಂದ ಕುಡಿಯುವ ನೀರನ್ನು 1 ಸಾವಿರ ಕೋಟಿ ರೂ.
6. ಗ್ರಾಮ ವಾಸ್ತವ್ಯದ ಹಿನ್ನೆಯಲ್ಲಿ ಕಳೆದ 10 ದಿನಗಳಿಂದ ಹೋಬಳಿ ಮಟ್ಟದಲ್ಲಿ ಕಂದಾಯ ಇಲಾಖೆಯ ಅದಾಲತ್ ನಡೆಸಲಾಗಿದ್ದು, 104 ಪಿಂಚಣಿ, 126 ಪಡಿತರ ಚೀಟಿ, 500ಕ್ಕೂ ಹೆಚ್ಚು ಪಹಣಿ ತಿದ್ದುಪಡಿ
7.ಜನತಾದರ್ಶನದಲ್ಲಿ ಮಧ್ಯಾಹ್ನ 12 ಗಂಟೆಯಿಂದ ಸಂಜೆ 7.30 ಗಂಟೆಯವರೆಗೆ ಸುಮಾರು 4000 ಅರ್ಜಿಗಳನ್ನು ಸ್ವೀಕಕಾರ ಮಾಡಲಾಗಿದ್ದು ಇಲಾಖಾವಾರು ವಿಂಗಡಿಸಿ ಪರಿಹಾರ.
8.ಅಂಗವಿಕಲರ ರಿಯಾಯತಿ ದರದ ಕೆಎಸ್‍ಆರ್‍ಟಿಸಿ ಬಸ್ ಪಾಸ್ ಮುಂದುವರೆಸಲು ಸೂಚನೆ
9.ಜನತಾದರ್ಶನದಲ್ಲಿ ಪಹಣಿ ತಿದ್ದುಪಡಿ, ವೈದ್ಯಕೀಯ ಚಿಕಿತ್ಸಾ ವೆಚ್ಚ, ವಿದ್ಯುತ್ ಪರಿವರ್ತಕಗಳ ಬದಲಾವಣೆ, ಸಾಲಮನ್ನಾ, ಸಾಮಾಜಿಕ ಭದ್ರತೆ ಯೋಜನೆಗಳಿಗೆ ಸಂಬಂಧಿಸಿದಂತೆ ಬಂದ ಸುಮಾರು 2 ಸಾವಿರ ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ
10.ಅಪಘಾತದಲ್ಲಿ ಗಾಯಗೊಂಡಿರುವ ಮುನಗಲ್ ಗ್ರಾಮದ ಇಂಜಿನಿಯರಿಂಗ್ ಪದವೀಧರ ಭೀಮರೆಡ್ಡಿ ಶಂಕರಪ್ಪ ಅವರಿಗೆ ತಕ್ಷಣ 5 ಲಕ್ಷ ರೂ.ಗಳ ಪರಿಹಾರ