ತಮ್ಮ ಸಹೋದರ ಸಚಿವ ಎಚ್‌.ಡಿ. ರೇವಣ್ಣನವರಿಗೆ ತಮ್ಮ ಎಚ್.ಡಿ ಕುಮಾರಸ್ವಾಮಿಗೆ ಕಿವಿಮಾತು ಹೇಳಿದ್ದಾರೆ. ‘ರೇವಣ್ಣಗೆ 24 ಗಂಟೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಮಾಡಬೇಕು ಎಂಬ ಹುಚ್ಚು ಮತ್ತು ಕನಸಿದೆ. ಅದು ನನಸಾಗಬೇಕಾದರೆ ಮೊದಲು ಕೋಪ ಬಿಡಬೇಕು, ಆತುರ ತ್ಯಜಿಸಬೇಕು ಎಂದಿದ್ದಾರೆ. 

ಹಾಸನ: ‘ರೇವಣ್ಣಗೆ 24 ಗಂಟೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಮಾಡಬೇಕು ಎಂಬ ಹುಚ್ಚು ಮತ್ತು ಕನಸಿದೆ. ಅದು ನನಸಾಗಬೇಕಾದರೆ ಮೊದಲು ಕೋಪ ಬಿಡಬೇಕು, ಆತುರ ತ್ಯಜಿಸಬೇಕು.’

ಹೀಗೆ ತಮ್ಮ ಸಹೋದರ ಸಚಿವ ಎಚ್‌.ಡಿ. ರೇವಣ್ಣನವರಿಗೆ ಕಿವಿಮಾತು ಹೇಳಿದ್ದು ಇನ್ಯಾರೂ ಅಲ್ಲ. ಅವರ ಕಿರಿಯ ಸಹೋದರ, ರಾಜ್ಯದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ.

ಚನ್ನರಾಯಪಟ್ಟಣದ ಉದಯಪುರದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಮ್‌ ರೇವಣ್ಣ ಹೃದಯವಂತ. ಆದರೆ ಕೋಪಿಸಿಕೊಳ್ಳುವುದು ಹುಟ್ಟು ಗುಣ. ಇದರಿಂದ ಆತ ಮಾಡಿದ ಬೆಟ್ಟದಷ್ಟುಅಭಿವೃದ್ಧಿ ಕೆಲಸಗಳೆಲ್ಲಾ ಹೊಳೆಯಲ್ಲಿ ಹುಣಸೆ ಹಣ್ಣು ತೊಯ್ದಂತೆ ಆಗುತ್ತಿದೆ. ಕೋಪ ಬಿಟ್ಟರೆ ಇನ್ನೂ ಎತ್ತರಕ್ಕೆ ಬೆಳೆಯಬಹುದು’ ಎಂದರು.

ನನ್ನ ಬಳಿ ರೇವಣ್ಣ ಬಂದು ಹಾಸನ ಜಿಲ್ಲೆ ಅಭಿವೃದ್ಧಿಗೆ ಓವರ್‌ ನೈಟ್‌ ಹಣ ಬಿಡುಗಡೆ ಮಾಡಬೇಕೆಂದು ಪಟ್ಟು ಹಿಡಿಯುತ್ತಾನೆ. ಆತುರ ಬಿಡಬೇಕು. ನನ್ನ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದಾಗ, ವೇದಿಕೆಯಲ್ಲಿದ್ದ ರೇವಣ್ಣ, ‘ಆಯ್ತು ಬಾರಣ್ಣ’ ಎಂದು ನಕ್ಕರು.