ಗುಜರಾತ್‌ ಮತಯಂತ್ರಗಳನ್ನೇ ರಾಜ್ಯಕ್ಕೆ ತಂದಿರುವುದು ಏಕೆ?

news | Sunday, March 18th, 2018
Suvarna Web Desk
Highlights

ಇತ್ತೀಚೆಗೆ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಬಳಸಿದ ಮತಯಂತ್ರ(ಇವಿಎಂ)ಗಳನ್ನು 3 ತಿಂಗಳು ಕಳೆಯುವುದರೊಳಗೆ ಕರ್ನಾಟಕಕ್ಕೆ ತಂದು ಬಳಸಲು ಮುಂದಾಗಿರುವುದು ಅನೇಕ ಸಂಶಯಗಳನ್ನು ಹುಟ್ಟಿಸಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ಹಾಸನ : ಇತ್ತೀಚೆಗೆ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಬಳಸಿದ ಮತಯಂತ್ರ(ಇವಿಎಂ)ಗಳನ್ನು 3 ತಿಂಗಳು ಕಳೆಯುವುದರೊಳಗೆ ಕರ್ನಾಟಕಕ್ಕೆ ತಂದು ಬಳಸಲು ಮುಂದಾಗಿರುವುದು ಅನೇಕ ಸಂಶಯಗಳನ್ನು ಹುಟ್ಟಿಸಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಸ್ತವವಾಗಿ ಒಂದು ರಾಜ್ಯದಲ್ಲಿ ಬಳಕೆಯಾದ ಮತಯಂತ್ರಗಳನ್ನು 3 ತಿಂಗಳೊಳಗೆ ಬೇರೆ ರಾಜ್ಯದ ಚುನಾವಣೆಗೆ ಉಪಯೋಗಿಸುವಂತಿಲ್ಲ. ಆದರೂ, ಏಕೆ ತರಲಾಗಿದೆ? ಟೆಕ್ನಿಷಿಯನ್‌ಗಳೇ ಇವಿಎಂ ಯಂತ್ರಗಳ ಬಗ್ಗೆ ಅಪಸ್ವರ ಎತ್ತಿದ್ದಾರೆ. ಚುನಾವಣೆಯಲ್ಲಿ ಇವಿಎಂ ಯಂತ್ರ ಬೇಡ ಎಂಬ ವಿಚಾರದಲ್ಲಿ ಚುನಾವಣಾ ಆಯೋಗ ಏಕೆ ಅನಗತ್ಯವಾಗಿ ಅನುಮಾನ, ಭಯ ಹುಟ್ಟಿಸುತ್ತಿದೆಯೋ ಗೊತ್ತಿಲ್ಲ. ಅಮೆರಿಕ ಸೇರಿ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಇವಿಎಂ ಯಂತ್ರ ಬಳಸದೆ ಬ್ಯಾಲೆಟ್‌ ಪೇಪರ್‌ ಬಳಸಲಾಗುತ್ತಿದೆ. ಹೀಗಿದ್ದರೂ ಇವಿಎಂ ಬಳಕೆ ವಿಚಾರದಲ್ಲಿ ಚುನಾವಣಾ ಆಯೋಗ ಹಠಕ್ಕೆ ಬಿದ್ದಿರುವುದು ಸರಿಯಲ್ಲ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಯೊಬ್ಬ ಅನುಮಾನಗಳ ಬಗ್ಗೆ ಮಾತನಾಡುವ ಸ್ವಾತಂತ್ರ್ಯ ಇಲ್ಲ ಎಂದರೆ ಹೇಗೆ? ಕೇಂದ್ರ ಚುನಾವಣಾ ಆಯೋಗದ ಆಯುಕ್ತರು ಗುಜರಾತ್‌ನವರೇ ಆಗಿರುವುದರಿಂದ ಸಹಜವಾಗಿಯೇ ಅನುಮಾನ ಮೂಡಿದೆ. ಇದನ್ನು ತಡೆಯಲು ಸಾಧ್ಯವಿಲ್ಲ. ಹಾಗಾಗಿ, ಇವಿಎಂ ಯಂತ್ರಗಳ ವಿಶ್ವಾರ್ಹತೆ ಬಗ್ಗೆ ಸಾರ್ವಜನಿಕವಾಗಿ ಖಚಿತಪಡಿಸಲೇಬೇಕು ಎಂದು ಆಗ್ರಹಿಸಿದರು.

ಒಂದು ವಿಧಾನಸಭಾ ಕ್ಷೇತ್ರದ 30 ರಿಂದ 40 ಬೂತ್‌ಗಳಲ್ಲಿ ಯಾವುದೇ ಬಟನ್‌ ಒತ್ತಿದರೂ ಒಂದೆ ಚಿಹ್ನೆಗೆ ಮತ ಬೀಳುವಂತೆ ಮಾಡಿದರೆ ಸಾಕು. ಗುಜರಾತ್‌ ಚುನಾವಣೆಯಲ್ಲಿ ಇವಿಎಂ ಯಂತ್ರಗಳನ್ನು ಬಳಸಿದ್ದರಿಂದ ಸೋಲಾಯಿತು ಎಂದು ಹೇಳಿದರೆ, ಉತ್ತರ ಪ್ರದೇಶ-ಬಿಹಾರ ಉಪ ಚುನಾವಣೆಗಳಲ್ಲಿ ಹೇಗೆ? ಗೆದ್ದರು ಎಂದು ಪ್ರಶ್ನಿಸುತ್ತಾರೆ. ಸಾರ್ವತ್ರಿಕ ಚುನಾವಣೆಗೂ ಉಪ ಚುನಾವಣೆಗೂ ಹೋಲಿಸಿ ಸಮರ್ಥನೆ ಮಾಡಿಕೊಳ್ಳುವುದು ವಿವೇಕವಲ್ಲ ಎಂದರು.

ಅವಿಶ್ವಾಸ ನಿರ್ಣಯ ಪರಿಣಾಮ ಬೀರಲ್ಲ: ಟಿಡಿಪಿ ಮತ್ತಿತರ ಪಕ್ಷಗಳು ಸೇರಿಕೊಂಡು ಪ್ರಧಾನಿ ಮೋದಿ ಅವರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರೆ ಪ್ರಯೋಜನವಾಗುವುದಿಲ್ಲ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಅಗತ್ಯ ಬಹುಮತ ಇದೆ. ಆದರೆ, ಮೋದಿ ವಿರುದ್ಧ ಧ್ವನಿ ಎತ್ತಲು ಅವಿಶ್ವಾಸ ಮಂಡನೆ ಸಹಾಯವಾಗುತ್ತದೆ. ಇದು ಬಿಜೆಪಿಯೊಳಗಿನ ಬಂಡಾಯಕ್ಕೂ ಪೂರಕವಾಗಬಹುದು ಎಂದರು.

ಸಂಸತ್‌ನಲ್ಲಿ 39 ಲೋಕಸಭೆ ಸದಸ್ಯರನ್ನು ಹೊಂದಿರುವ ತಮಿಳುನಾಡಿನ ಎಐಡಿಎಂಕೆ ಕಾವೇರಿ ನಿರ್ವಹಣಾ ಮಂಡಳಿ ರಚಿಸಿದರೆ, ಬಿಜೆಪಿಗೆ ಅವಿಶ್ವಾಸ ನಿರ್ಣಯದ ವೇಳೆ ಬೆಂಬಲ ನೀಡುವುದಾಗಿ ಹೇಳುತ್ತಿದೆ. ಆದರೆ, ಕೇವಲ 2 ಸೀಟುಗಳನ್ನು ಹೊಂದಿರುವ ಜೆಡಿಎಸ್‌ ಕರ್ನಾಟಕ ಪರ ನಿಲ್ಲುವುದು ತುಂಬಾ ಕಷ್ಟಎಂದರು.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk