ಬಿಲ್’ಗಾಗಿ ನನ್ನ ಮುಂದೆ ಕೈ ಒಡ್ಡುತ್ತಿದ್ದರು : ಇಬ್ಬರು ಸಹೋದರರ ವಿರುದ್ಧ ದೇವೇಗೌಡರ ವಾಗ್ದಾಳಿ..

First Published 31, Mar 2018, 10:59 AM IST
HD Devegowda Slams Cheluvaraya Swamy
Highlights

ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಜೆಡಿಎಸ್ ಮಾಜಿ ಶಾಸಕ ಚೆಲುವರಾಯ ಸ್ವಾಮಿ ಸ್ವಕ್ಷೇತ್ರದಲ್ಲಿ ಜೆಡಿಎಸ್ ತನ್ನ ಬಲ ಪ್ರದರ್ಶಿಸಿತು.

ನಾಗಮಂಗಲ: ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಜೆಡಿಎಸ್ ಮಾಜಿ ಶಾಸಕ ಚೆಲುವರಾಯ ಸ್ವಾಮಿ ಸ್ವಕ್ಷೇತ್ರದಲ್ಲಿ ಜೆಡಿಎಸ್ ತನ್ನ ಬಲ ಪ್ರದರ್ಶಿಸಿತು.

ಪಟ್ಟಣದಲ್ಲಿ ಶುಕ್ರವಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಶುಕ್ರವಾರ ನಡೆದ ‘ಕುಮಾರಪರ್ವ’ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು.

ಈ ವೇಳೆ ಮಾತನಾಡಿದ ದೇವೇಗೌಡ, ತಾಲೂಕಿನಲ್ಲಿ ಗುತ್ತಿಗೆ ಮಾಡಿಕೊಂಡಿದ್ದ ಸಹೋದರರಿಬ್ಬರು ಬಿಲ್‌ಗಾಗಿ ನನ್ನೆದಿರುವ ನಿಲ್ಲುತ್ತಿದ್ದರು. ಇಂತಹವರನ್ನು ಕರೆತಂದು ಮೂರು ಬಾರಿ ಶಾಸಕ, ಸಂಸದ, ಮಂತ್ರಿಯನ್ನಾಗಿ ಮಾಡಿದೆವು. ಆದರೆ, ನೀವು ಸಂಸದ ಚುನಾವಣೆಗೆ ನಿಂತಾಗ ಪಾಂಡವಪುರ ತಾಲೂಕಿನಿಂದ ಪುಟ್ಟರಾಜು 10 ಸಾವಿರ ಅಧಿಕ ಮತ ಕೊಡಿಸಿದರು. ಆದರೆ ಪುಟ್ಟರಾಜು ಚುನಾವಣೆಗೆ ನಿಂತಾಗ ನಿಮ್ಮ ಕ್ಷೇತ್ರದಲ್ಲಿ 13 ಸಾವಿರ ಮತಗಳ ಹಿನ್ನಡೆ ಕೊಟ್ಟು, ಅವರನ್ನು ರಾಜಕೀಯವಾಗಿ

ತುಳಿಯುವ ಕೆಲಸ ಮಾಡಿದ್ದೀರಿ ಎಂದು ಚಲುವರಾಯ ಸ್ವಾಮಿಯನ್ನು ಗೌಡರು ತರಾಟೆಗೆ ತೆಗೆದುಕೊಂಡರು.

‘ಕುಮಾರಣ್ಣನ ಆರೋಗ್ಯ ಕೆಟ್ಟುಹೋ ಯಿತು. ಅವರಪ್ಪನಿಗೆ ವಯಸ್ಸಾಯಿತು. ಇನ್ನು ಮುಂದೆ ನಾನೇ

ರಾಜ, ಮಾಗಡಿ ಬಾಲಕೃಷ್ಣನೇ ಮಂತ್ರಿ ಎಂದು ಸಭೆಯಲ್ಲಿ ಕಿಚನ್ ಟಾಕ್ ಮಾಡುತ್ತೀರಿ. ಇಂದು ಕುಮಾರ ಸ್ವಾಮಿಯ ಎದುರಿಗೆ ನಿಂತು ಭುಜ ತಟ್ಟುಲು ಹೊರಟಿ ದ್ದೀರಿ. ನನ್ನ ಕೊನೆ ಉಸಿರು ಇರುವವರೆಗೂ ಇದಕ್ಕೆ ಅವಕಾಶ ನೀಡಲ್ಲ.

ಪಕ್ಷದ ಅಭ್ಯರ್ಥಿ ಸುರೇಶ್ ಗೌಡರನ್ನು ಗೆಲ್ಲಿಸುವ ಸಲುವಾಗಿ ಇನ್ನೂ 2-3 ಬಾರಿ ಕ್ಷೇತ್ರಕ್ಕೆ ಭೇಟಿ ಕೊಡುತ್ತೇನೆ’ ಎಂದರು. ನಮ್ಮ ಪಕ್ಷದಲ್ಲಿ ಉಂಡು, ತಿಂದು, ತೇಗಿ ಬೆಳೆದು ಪಕ್ಷವನ್ನೇ ಸರ್ವನಾಶ ಮಾಡಲು ಹೊರಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನ ಕನಸು ಈಡೇರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

loader