ನವದೆಹಲಿ[ಆ.05]: ಮುಂದಿನ ವರ್ಷ ಜರುಗಲಿರುವ ಲೋಕಸಭೆ ಚುನಾವಣೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಶಾಕ್ ನೀಡಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೊಸದೊಂದು ದಾಳ ಉರುಳಿಸಿದ್ದಾರೆ.

ಮಹಾ ಮೈತ್ರಿಗೆ ಪ್ರಬಲ ಪ್ರಧಾನಿ ನರೇಂದ್ರ ಮೋದಿಯನ್ನು ಎದುರಿಸಲು ಮಹಿಳಾ ಪ್ರಧಾನಿ ಅಭ್ಯರ್ಥಿಗಳ ಹೆಸರನ್ನು ಜೆಡಿಎಸ್ ವರಿಷ್ಠರು ತೇಲಿಬಿಟ್ಟಿದ್ದಾರೆ.
2019ರ ಲೋಕಸಭೆ ಚುನಾವಣೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಬಿಎಸ್ಪಿ ನಾಯಕಿ ಮಾಯಾವತಿ ಅವರು ವಿರೋಧ ಪಕ್ಷಗಳ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಲು ಸಮ್ಮತಿ ಸೂಚಿಸಿದ್ದಾರೆ.

ಪಿಟಿಐ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡದ ದೇವೇಗೌಡರು,  ಒಂದು ವೇಳೆ ತೃತೀಯ ರಂಗ ರಚನೆಯಾದರೆ  ಮಮತಾ ಅವರು ಬಿಜೆಪಿಯೇತರ ಪಕ್ಷಗಳ ವಿರುದ್ಧವಾಗಿ ಪ್ರಧಾನಿ ಅಭ್ಯರ್ಥಿಯಾಗಿ ಅತ್ಯುತ್ತಮ ಆಯ್ಕೆಯಾಗಬಹುದು ಎಂದಿದ್ದಾರೆ.

ಅಸ್ಸಾಂ ನಲ್ಲಿ 40 ಲಕ್ಷ ಮಂದಿಯ ನಾಗರಿಕರನ್ನು ರಾಷ್ಟ್ರೀಯ ನೋಂದಣಿಯಿಂದ ಬೇರ್ಪಡಿಸಿರುವುದರಿಂದ ಕೇಂದ್ರ ಸರ್ಕಾರದ ವಿರುದ್ಧ ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸುತ್ತಿದ್ದಾರೆ.ವಿರೋಧ ಪಕ್ಷಗಳಿಂದ ಪ್ರಧಾನಿ ಅಭ್ಯರ್ಥಿಯನ್ನಾಗಿ ನೇಮಿಸಲು ನಮ್ಮ ಸಂಪೂರ್ಣ ಸಹಕಾರವಿದೆ. ಇಂದಿರಾ ಗಾಂಧಿ 17 ವರ್ಷ ಪ್ರಧಾನಿಯಾಗಿರಲಿಲ್ಲವೇ, ಏಕೆ ಕೇವಲ ಪುರುಷರೆ ಪ್ರಧಾನಿಯಾಗಬೇಕು, ಮಮತಾ, ಮಾಯಾವತಿ ಏಕಾಗಬಾರದು ' ಎಂದು ಪ್ರಶ್ನಿಸಿದರು.

ತಾವು ಪ್ರಧಾನಿಯಾಗಿದ್ದಾಗ ಮಹಿಳಾ ಮೀಸಲಾತಿ ಬಿಲ್ ಅನ್ನು ಪಾಸ್ ಮಾಡಿರುವ ಬಗ್ಗೆ ಇದೇ ಸಂದರ್ಭದಲ್ಲಿ ತಿಳಿಸಿದರು.  ಚುನಾವಣಾ ಬಳಿಕವಷ್ಟೆ ಪ್ರಧಾನಿ ಅಭ್ಯರ್ಥಿ ತೀರ್ಮಾನ ಎಂಬ ಕಾಂಗ್ರೆಸ್ ಹೇಳಿಕೆಯ ನಂತರ ಮಾಜಿ ಪ್ರಧಾನಿ ಮಾತುಗಳು ಅಚ್ಚರಿ ತಂದಿದೆ.