ಜೆಡಿಎಸ್‌ನಲ್ಲಿದ್ದಾಗ ನನಗೆ 2 ಬಾರಿ ಮುಖ್ಯಮಂತ್ರಿ ಪಟ್ಟ ತಪ್ಪಿಸಿದ್ದರು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ‘ಅವತ್ತು ಸಿಎಂ ಆಗುತ್ತೇನೆ ಎಂದು ಸಿದ್ದರಾಮಯ್ಯ ದೆಹಲಿಗೆ ಬಂದಿದ್ದಾಗ ಜೆ.ಎಚ್. ಪಟೇಲರು ಅವರಿಗೆ ಜೋಡು (ಎಕ್ಕಡ) ಹಿಡಿದು ನಿಂತಿದ್ದರು’ ಎಂದು ಹೇಳಿದ್ದಾರೆ.

ಕೊಪ್ಪಳ : ಜೆಡಿಎಸ್‌ನಲ್ಲಿದ್ದಾಗ ನನಗೆ 2 ಬಾರಿ ಮುಖ್ಯಮಂತ್ರಿ ಪಟ್ಟ ತಪ್ಪಿಸಿದ್ದರು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ‘ಅವತ್ತು ಸಿಎಂ ಆಗುತ್ತೇನೆ ಎಂದು ಸಿದ್ದರಾಮಯ್ಯ ದೆಹಲಿಗೆ ಬಂದಿದ್ದಾಗ ಜೆ.ಎಚ್. ಪಟೇಲರು ಅವರಿಗೆ ಜೋಡು (ಎಕ್ಕಡ) ಹಿಡಿದು ನಿಂತಿದ್ದರು’ ಎಂದು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಕೊಪ್ಪಳ ಗವಿಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಇವರನ್ನು(ಸಿದ್ದು) ಡಿಸಿಎಂ ಮಾಡಿದ್ದು ಯಾರು? ಎಲ್ಲಿದ್ದವರು ಇವರೆಲ್ಲಾ’ ಎಂದು ಪ್ರಶ್ನಿಸಿದರು. ‘ಹೆಗಡೆ ಅವರಿಗಿಂತ ದೊಡ್ಡ ಲೀಡ್ರಾ ಇವರು? ಅಂದು ದೆಹಲಿಯ ಕರ್ನಾಟಕ ಭವನದಲ್ಲಿ ನಾನು ಸಿಎಂ ಆಗ್ತೀನಿ ಅಂತ ಬಂದಾಗ ಸಿದ್ದರಾಮಯ್ಯಗೆ ಜೆ.ಎಚ್. ಪಟೇಲರು ಕೆಳಗಿನ ಜೋಡು (ಎಕ್ಕಡ) ಹಿಡಿದು ನಿಂತಿದ್ದರು. ನೀನು ಪಕ್ಷಕ್ಕೆ ಬಂದು ಎಷ್ಟು ದಿನವಾಯ್ತು? ನಾವೆಲ್ಲಾ ಇಲ್ಲವೇ’ ಎಂದು ಪಟೇಲ್ ಅವರೇ ಸಿದ್ದರಾಮಯ್ಯ ಅವರನ್ನು ತಡೆದು ದಬ್ಬಿದ್ದರು. ಇದೆಲ್ಲವೂ ಗೊತ್ತಿಲ್ಲವೇ ಸಿದ್ದರಾಮಯ್ಯಗೆ ಎಂದು ಪ್ರಶ್ನೆ ಮಾಡಿದರು.

ಈಗ ಸಿದ್ದರಾಮಯ್ಯ ಬಳಿ ಅಧಿಕಾರ, ಹಣ ಇದೆ. ಹೀಗಾಗಿ, ಅಹಂಕಾರದಿಂದ ಮಾತನಾಡುತ್ತಾರೆ. ಇವರು ಬೆಳೆದಿದ್ದು ಎಲ್ಲಿಂದ? ಏಕಾಏಕಿ ಬೆಳೆದರೇ ಎಂದು ಮರು ಪ್ರಶ್ನೆ ಮಾಡಿದರು. ಇದೆಲ್ಲವೂ ಸಿದ್ದರಾಮಯ್ಯ ಅವರಿಗೆ ಕೆಲವೇ ದಿನಗಳಲ್ಲಿ ಮನವರಿಕೆಯಾಗಲಿದೆ. ಆಗ ಸತ್ಯ ಗೊತ್ತಾಗುತ್ತದೆ. ಎಂ.ಪಿ. ಪ್ರಕಾಶ, ರಾಯರಡ್ಡಿ ಸೇರಿದಂತೆ ಇವರೆಲ್ಲ ಬೆಳೆದಿದ್ದು ಎಲ್ಲಿಂದ ಎಂದು ಆಕ್ರೋಶ ವ್ಯಕ್ತಪಡಿಸಿದರು.