ನವದೆಹಲಿ[ಜ.01]  ರಾಜ್ಯದ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪಾರದರ್ಶಕ ರೀತಿಯಲ್ಲಿ 60 ಸಾವಿರ ರೈತರ ಸಾಲ ಮನ್ನಾ ಮಾಡಿದೆ.  ಪ್ರಧಾನಿ ಅವರು ಇದನ್ನು ವ್ಯಂಗ್ಯವಾಗಿ ಟೀಕಿಸುತ್ತಿರುವುದು ಸರಿಯಲ್ಲ.  ನಾನು ಅವರಿಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಲಾರೆ‌ ಎಂದು ದೇವೇಗೌಡರು ಹೇಳಿದ್ದಾರೆ.

"

ನವದೆಹಲಿಯಲ್ಲಿ ಮಾತನಾಡಿದ ದೇವೇಗೌಡರು,  ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ 6500 ಕೋಟಿ ಮತ್ತು ಕುಮಾರಸ್ವಾಮಿ ಸರ್ಕಾರದ 3500 ಕೋಟಿ ಸೇರಿ ಒಟ್ಟು 10 ಸಾವಿರ ಕೋಟಿ ರೂ. ಅಪೇಕ್ಸ್ ಬ್ಯಾಂಕ್ ಗೆ ಸಾಲ ಮನ್ನಾ ಆಗಿದೆ ಎಂದರು.

ದೋಸ್ತಿ ಸರ್ಕಾರದ ಬಗ್ಗೆ ದೇವೇಗೌಡರ ಎಚ್ಚರಿಕೆ ಸಂದೇಶ

ಒಟ್ಟಿನಲ್ಲಿ ರಾಜ್ಯ ಸರಲಕಾರ ನೀಡಿದ್ದ ಸಾಲ ಮನ್ನಾ ಕುರಿತಾಗಿ ಪ್ರಧಾನಿ ಮಾತಾಡಿದ್ದಕ್ಕೆ ದೇವೇಗೌಡರು ತಮ್ಮದೆ ಶೈಲಿಯ ಉತ್ತರ ನೀಡಿದ್ದಾರೆ. ಕೇಂದ್ರ ಸರಕಾರ ಸಹ ವಾಣಿಜ್ಯ ಬ್ಯಾಂಕ್‌ಗಳಲ್ಲಿರುವ ಸಾಲ ಮನ್ನಾ ಸಂಬಂಧ ಮಾಹಿತಿ ಕಲೆಹಾಕುತ್ತಿದೆ.