ಈ ಸಂದರ್ಭದಲ್ಲಿ ವೇದಿಕೆ ಮೇಲೆರಿದ ಡಿ.ಎಂ.ವಿಶ್ವನಾಥ್ ಹಾಗೂ ಕಬ್ಬಾಳಯ್ಯ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಸಿದರು.

ಕನಕಪುರ(ಮಾ.03): ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಬಣಗಳ ಕಾರ್ಯಕರ್ತರು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ವಾಗ್ವಾದ ನಡೆಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕನಕಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಆಯ್ಕೆಗಾಗಿ ದೇವೇಗೌಡರ ನೇತೃತ್ವದಲ್ಲಿ ಸಭೆ ನಡೆಯುತ್ತಿತ್ತು. ಸ್ಥಳೀಯ ಮುಖಂಡರು ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆರಿದ ಡಿ.ಎಂ.ವಿಶ್ವನಾಥ್ ಹಾಗೂ ಕಬ್ಬಾಳಯ್ಯ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಸಿದರು.

ಎರಡೂ ಕಡೆಯ ನಾಯಕರ ಕಾರ್ಯಕರ್ತರ ಮಾತಿನ ಘರ್ಷಣೆ ವಿಪರೀತಕ್ಕೆ ಹೋದಾಗ ತಾಳ್ಮೆ ಕಳೆದುಕೊಂಡ ದೇವೇಗೌಡರು 'ನಿಮಗೆ ಮಾನ ಮರ್ಯಾದೆ ಇದ್ಯಾ'ಎಂದು ಕಾರ್ಯಕರ್ತರ ವಿರುದ್ಧ ರೇಗಾಡಿದರು.