ಅಭಿವೃದ್ಧಿ ಮಾಡಿದ್ದೇನೆ ಅಂತ ಹೇಳುವ ಭರದಲ್ಲಿ ಹಿಂದಿನವರು ಸಾಧನೆ ಮಾಡಿಲ್ಲ ಎಂದು ಸಿಎಂ ಹೇಳಿಕೆ ನೀಡಿದ್ದಾರೆ. ಈ ವೇಳೆ ನನ್ನ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್’ಡಿ ದೇವೇಗೌಡ ಹೇಳಿದ್ದಾರೆ.
ಬೆಂಗಳೂರು (ಡಿ.30): ಅಭಿವೃದ್ಧಿ ಮಾಡಿದ್ದೇನೆ ಅಂತ ಹೇಳುವ ಭರದಲ್ಲಿ ಹಿಂದಿನವರು ಸಾಧನೆ ಮಾಡಿಲ್ಲ ಎಂದು ಸಿಎಂ ಹೇಳಿಕೆ ನೀಡಿದ್ದಾರೆ. ಈ ವೇಳೆ ನನ್ನ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್’ಡಿ ದೇವೇಗೌಡ ಹೇಳಿದ್ದಾರೆ.
ಬೇರೆಯವರ ಬಗ್ಗೆ ಮಾತನಾಡುವಾಗ ಭಾಷೆಯಲ್ಲಿ ಹಿಡಿತ ಇರಬೇಕು. ನಾನು ಮಾತನಾಡಬಹುದು ಆದ್ರೆ ಈಗ ಬೇಡ. ಆದ್ರೆ ನನ್ನ ಮಾತು ಈಗ ಆರಂಭ ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಗರಂ ಆಗಿದ್ದಾರೆ. ಸಾರ್ವಜನಿಕರ ಹಣದಲ್ಲಿ ಸಮಾವೇಶ ಮಾಡಲಾಗುತ್ತಿದೆ.
ನವಕರ್ನಾಟಕ ನಿರ್ಮಾಣ ಮಾಡಲಿಕ್ಕೆ ಇವರೊಬ್ಬರೇ ಹುಟ್ಟಿರೋದು. ನಿಜಲಿಂಗಪ್ಪ , ದೇವರಾಜ ಅರಸು, ಸೇರಿದಂತೆ ಎಲ್ಲರು ಆಡಳಿತ ನಡೆಸಿದ್ದಾರೆ. ಇವರೊಬ್ಬರೇನಾ ಆಡಳಿತ ಮಾಡಿದ್ದು. ದೇವೇಗೌಡರ ಬಗ್ಗೆ ಮಾತನಾಡುವಾಗ ಇತಿಹಾಸ ತಿಳಿದು ಮಾತನಾಡಬೇಕು. ಸಿದ್ದರಾಮಯ್ಯ ಬಿರುಸಿನ ಮಾತುಗಳನ್ನು ಕಡಿಮೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೇವೇಗೌಡ ಅವರು ಹೇಳಿದ್ದಾರೆ.
