ಬೆಂಗಳೂರು[ಸೆ.23]: ಸಂಸದ ತೇಜಸ್ವಿ ಸೂರ್ಯ ಅವರನ್ನು ಹೊಗಳುವ ಮೂಲಕ ದೇವೇಗೌಡ ಅಚ್ಚರಿ ಮೂಡಿಸಿದ್ದಾರೆ.

ತೇಜಸ್ವಿ ಸೂರ್ಯ ಅವರ ಬದ್ಧತೆ ಇಷ್ಟವಾಯಿತು. ಅವರಿಗೆ ರಾಜ್ಯದ ಜನರ ಬಗ್ಗೆ ಇರುವ ಕಾಳಜಿ ನನಗೆ ಮೆಚ್ಚುಗೆಯಾಗಿದೆ ಎಂದರು. ನಾನು ಅವರಿಗೆ ಪ್ರಮಾಣ ಪತ್ರ ಕೊಡುವ ಅಗತ್ಯ ಇಲ್ಲ. ರಾಜ್ಯದ ಜನತೆ ನನಗೆ ಮುಖ್ಯ. ಉದಯೋನ್ಮುಖ ನಾಯಕರಿಗೆ ಇಂತಹ ಭಾವನೆ ಇರಬೇಕಾಗಿರುವುದು ಅಗತ್ಯ. ಪಕ್ಷ ಯಾವುದಾದರೂ ಇರಲಿ, ಒಳ್ಳೆಯ ಕೆಲಸಗಳನ್ನು ಶ್ಲಾಘಿಸಬೇಕು. ಆದರೆ, ಯಡಿಯೂರಪ್ಪ ಅವರಿಗೆ ರಾಜ್ಯದ ಜನರ ಪರವಾಗಿ ಬದ್ಧತೆ ಇಲ್ಲ. ಅವರಿಗೆ ಕುರ್ಚಿಯ ಮೇಲೆ ಚಿಂತೆ ಇದೆ ಎಂದು ಹೇಳಿದರು.

ಕಳೆದೆರಡು ದಿನಗಳ ಹಿಂದೆ ಸಂಸದ ತೇಜಸ್ವಿ ಸೂರ್ಯ ರಾಜ್ಯದ ನೆರೆ ಪರಿಹಾರಕ್ಕೆ ಕೇಂದ್ರದ ಅಗತ್ಯವಿಲ್ಲ, ಪ್ರಧಾನಿ ಮೋದಿ ರಾಜ್ಯಗಳಿಗೆ ಹೆಚ್ಚಿನ ಅನುದಾನ ಸಿಗುವಂತೆ ಮಾಡಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.