ರೋಗಿಗಳ‌ ಸಾವು ನೋವು ಸಂಭವಿಸುತ್ತಿವೆ. ಹೀಗಿದ್ದು ಸರ್ಕಾರ ಕಣ್ಣುಮುಚ್ಚಿ ಕೂರುವುದು ಸರಿಯಲ್ಲ ಎಂದು ಸರ್ಕಾರವನ್ನು ಹೈಕೋರ್ಟ್ ತರಾಟರಗೆ ತೆಗೆದುಕೊಂಡಿದೆ. ವೈದ್ಯ ಮುಷ್ಕರದ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಏನು ಕೈಗೊಂಡಿದ್ದೀರಾ ? ಈ ಕುರಿತು ವರದಿ ನೀಡುವಂತೆ ಹೈಕೋರ್ಟ್ ತಾಕೀತು ಮಾಡಿದೆ. ವರದಿ ಸಲ್ಲಿಸಲು ಅಡ್ವೋಕೇಟ್ ಜನರಲ್ ಕಾಲಾವಕಾಶ ಕೇಳಿದ್ದು ಸೋಮವಾರ ಸಮಗ್ರ ವರದಿ ಸಲ್ಲಿಸುವುದಾಗಿ ಹೈಕೋರ್ಟ್ಗೆ ಎಜಿ ಹೇಳಿದ್ದಾರೆ.
ಬೆಂಗಳೂರು (ನ.17): ರೋಗಿಗಳ ಸಾವು ನೋವು ಸಂಭವಿಸುತ್ತಿವೆ. ಹೀಗಿದ್ದು ಸರ್ಕಾರ ಕಣ್ಣುಮುಚ್ಚಿ ಕೂರುವುದು ಸರಿಯಲ್ಲ ಎಂದು ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ವೈದ್ಯ ಮುಷ್ಕರದ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಏನು ಕೈಗೊಂಡಿದ್ದೀರಾ ? ಈ ಕುರಿತು ವರದಿ ನೀಡುವಂತೆ ಹೈಕೋರ್ಟ್ ತಾಕೀತು ಮಾಡಿದೆ. ವರದಿ ಸಲ್ಲಿಸಲು ಅಡ್ವೋಕೇಟ್ ಜನರಲ್ ಕಾಲಾವಕಾಶ ಕೇಳಿದ್ದು ಸೋಮವಾರ ಸಮಗ್ರ ವರದಿ ಸಲ್ಲಿಸುವುದಾಗಿ ಹೈಕೋರ್ಟ್ಗೆ ಎಜಿ ಹೇಳಿದ್ದಾರೆ.
ಖಾಸಗಿ ವೈದ್ಯರ ಮುಷ್ಕರ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್'ನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.
ಮುಷ್ಕರ ಸ್ಥಗಿತಗೊಳಿಸಲು ಹೈಕೋರ್ಟ್ ವೈದ್ಯರಿಗೆ 10 ನಿಮಿಷಗಳ ಗಡುವು ನೀಡಿದೆ. ಮುಷ್ಕರ ನಿರತ ವೈದ್ಯರಿಗೆ ಹೈಕೋರ್ಟ್ ಖಡಕ್ ಎಚ್ಚರಿಕೆ ನೀಡಿದ್ದು, ಮುಷ್ಕರ ಬಿಟ್ಟು ಮೊದಲು ಜನ ಸೇವೆ ಮಾಡಿ. ಮುಷ್ಕರ ನಿಲ್ಲಿಸಿ ಸೇವೆ ಸಲ್ಲಿಸಿ, ಇಲ್ಲ ಅಂದ್ರೆ ಕೋರ್ಟ್ ಸೂಕ್ತ ಕ್ರಮ ಕೈಗೊಳ್ಳತ್ತೆ. ನೀವು ಜೀವ ರಕ್ಷಕರೋ ? ಜೀವ ತೆಗೆಯೋರೋ ? ಕಾಯ್ದೆಯಲ್ಲಿ ತಿದ್ದುಪಡಿ, ಅಥವಾ ಕೈಬಿಡುವ ಅಂಶಗಳಿದ್ದರೆ ಕೋರ್ಟಿನಲ್ಲಿ ಪ್ರಶ್ನಿಸಬಹುದಿತ್ತು. ಅದೆಲ್ಲವನ್ನು ಬಿಟ್ಟು ವೃತ್ತಿಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೀರಾ ? ಇದು ನಿಮಗೆ ಸರಿ ಕಾಣುತ್ತಿದೆಯಾ? ವಿಧೇಯಕದಲ್ಲಿ ಸಮಸ್ಯೆ ಇದ್ದರೆ ನಾವೇ ಕೈಬಿಡೋಣ. ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ಎಂದು ಹೈಕೋರ್ಟ್ ವೈದ್ಯರಿಗೆ ಸೂಚನೆ ನೀಡಿದೆ.
ಸರ್ಕಾರದ ನಿಲುವೇನು ಎಂಬುದನ್ನು ಸಂಜೆ 4.30 ಕ್ಕೆ ತಿಳಿಸಲು ಹೈಕೋರ್ಟ್ ಎಜಿಗೆ ಸೂಚಿಸಿದೆ.
