ರಾಜ್ಯ ಸರ್ಕಾರ ಗರಿಷ್ಟ 200 ರೂಪಾಯಿ ನಿಗದಿ ಮಾಡಿ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಮಲ್ಟಿಪಲ್ಲೆಕ್ಸ್ ಅಸೋಸಿಯೇಷನ್ ರಿಟ್ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಬೆಂಗಳೂರು(ಮೇ.11): ಮಲ್ಟಿಪ್ಲೆಕ್ಸ್ನಲ್ಲಿ ಪರಭಾಷಾ ಚಿತ್ರಗಳಗೆ ಗರಿಷ್ಠ 200 ರೂ. ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ವಾರಂತ್ಯ ಹಾಗೂ ಸರ್ಕಾರಿ ರಜೆ ದಿನದ ಸಂದರ್ಭದಲ್ಲಿ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಏಕಸದ್ಯ ಪೀಠದಿಂದ ತಡೆ ನೀಡಿದೆ.
ರಾಜ್ಯ ಸರ್ಕಾರ ಗರಿಷ್ಟ 200 ರೂಪಾಯಿ ನಿಗದಿ ಮಾಡಿ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಮಲ್ಟಿಪಲ್ಲೆಕ್ಸ್ ಅಸೋಸಿಯೇಷನ್ ರಿಟ್ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಸರ್ಕಾರವು ಮಲ್ಟಿಫ್ಲೆಕ್ಸ್'ಗಳ ವಿರುದ್ಧ ತಾರತಮ್ಯ ಧೋರಣೆ ತಾಳುತ್ತಿದ್ದು, ಯೂಟ್ಯೂಬ್,ನೆಟ್'ಫ್ಲೆಕ್ಸ್, ಡಿಟಿ'ಹೆಚ್'ಗೆ ನಿರ್ಬಂಧ ವಿಧಿಸಿಲ್ಲ. ಸರ್ಕಾರದ ಆದೇಶ ಸಮಾನತೆ ಹಕ್ಕಿನ ಉಲ್ಲಂಘನೆಯಾಗಿದೆ. ಸಿನಿಮಾ ಪರವಾನಗಿ ವಿಚಾರದಲ್ಲಿ ಜಿಲ್ಲಾಧಿಕಾರಿಗಳಿಗೆ ಮಾತ್ರ ಅಧಿಕಾರವಿದೆ. ಸರ್ಕಾರ ಆದೇಶ ಹೊರಡಿಸುವ ಮೂಲಕ ನಿರ್ಬಂಧಿಸುವಂತಿಲ್ಲ' ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ರಿಟ್ ಅರ್ಜಿ ಸಲ್ಲಿಸಿವೆ.