ಬೆಂಗಳೂರು ಡಿಸಿಗೆ ಹೈಕೋರ್ಟ್ ತರಾಟೆ

HC quashes Bengaluru DC Dayanand
Highlights

  • ಯಲಹಂಕ ಬಳಿ 24 ಗುಂಟೆ  ಸ್ಮಶಾನ ಭೂಮಿ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ತರಾಟೆ
  • ನ್ಯಾಯಮೂರ್ತಿಗಳಾದ ರಾಘವೇಂದ್ರ ಚವ್ಹಾಣ್ ಹಾಗೂ ನರೇಂದ್ರ ಪ್ರಸಾದ್ ಅವರಿಂದ ವಿಭಾಗೀಯ ಪೀಠ
  • ವಿಚಾರಣೆಯನ್ನು ಜೂನ್27 ಕ್ಕೆ ಮುಂದೂಡಿಕೆ

ಬೆಂಗಳೂರು(ಜೂ.25): ಯಲಹಂಕ ಬಳಿ ಸ್ಮಶಾನಕ್ಕಾಗಿ ಭೂಮಿ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಅವರಿಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಯಲಹಂಕ ಬಳಿ 24 ಗುಂಟೆ  ಸ್ಮಶಾನ ಭೂಮಿ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಯೊಗೇಶ್ವರ್ ಎಂಬುವವರು ಅರ್ಜಿ ಸಲ್ಲಿಸಿದ್ದರು.ಹಿಂದಿನ ವಿಚಾರಣೆ ವೇಳೆ ಸೂಕ್ತ ಕ್ರಮಕೈಗೊಳ್ಳುವಂತೆ ಹೈಕೋರ್ಟ್ ಸೂಚಿಸಿತ್ತು. ಆದರೆ ಜಿಲ್ಲಾಧಿಕಾರಿ ಅವರು ಚುನಾವಣೆ ಕಾರಣ ನೀಡಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. 

ಇದೇ ಕಾರಣಕ್ಕಾಗಿ ಜಿಲ್ಲಾಧಿಕಾರಿ ಅವರನ್ನು ಖುದ್ದು ಹಾಜರಿಗೆ ಸೂಚಿಸಿತ್ತು. ಜಿಲ್ಲಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳಾದ ರಾಘವೇಂದ್ರ ಚವ್ಹಾಣ್ ಹಾಗೂ ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ 'ಎಲ್ಲದಕ್ಕೂ ಚುನಾವಣೆ ಕಾರಣ ನೀಡುತ್ತಿದ್ದೀರಿ. ಚುನಾವಣೆ ವೇಳೆ ಊಟ ತಿಂಡಿ ಮಾಡಿಲ್ವಾ. ಕಚೇರಿ ಕಾರಿನಲ್ಲಿ ತಿರುಗಾಡಿಲ್ವಾ ? ಕೆಲಸದಿಂದ ತಪ್ಪಿಸಿಕೊಳ್ಳಲು ನೂರಾರು ಕಾರಣ ನೀಡುತ್ತೀರಿ. ಹಣ ಕೊಟ್ಟಿದ್ದರೇ ಜೋರಾಗಿ ಕೆಲಸ ಮಾಡುತ್ತಿದ್ದೀರಿ. ಕೂಡಲೇ ಅರ್ಜಿದಾರನಿಗೆ ಪರ್ಯಾಯ ಜಮೀನು ನೀಡುವಂತೆ ಸೂಚಿಸಿ ವಿಚಾರಣೆಯನ್ನು ಜೂನ್27 ಕ್ಕೆ ಮುಂದೂಡಿದರು.

loader