ಸುಳ್ಳು ದಾಖಲೆ ನೀಡಿ ಜಾಮೀನು : ರವಿ ಬೆಳಗೆರೆಗೆ ಹೈಕೋರ್ಟ್ ನೋಟಿಸ್

First Published 5, Apr 2018, 3:58 PM IST
HC Notice Issue Ravi Belagere
Highlights

ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ವೈದ್ಯಕೀಯ ದಾಖಲೆಗಳನ್ನು ಕೋರ್ಟ್'ಗೆ ನೀಡಿ ಜಾಮೀನು ಪಡೆದಿದ್ದಾರೆ.

ಬೆಂಗಳೂರು(ಏ.05): ಕೋರ್ಟ್‌ಗೆ ಸುಳ್ಳು ದಾಖಲೆಗಳನ್ನು ನೀಡಿ ಜಾಮೀನು ಪಡೆದಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಹೈಕೋರ್ಟ್'ನ ಏಕಸದಸ್ಯ ಪೀಠ ಪತ್ರಕರ್ತ ರವಿ ಬೆಳಗೆರೆಗೆ ನೋಟಿಸ್ ನೀಡಿದೆ.

ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ವೈದ್ಯಕೀಯ ದಾಖಲೆಗಳನ್ನು ಕೋರ್ಟ್'ಗೆ ನೀಡಿ ಜಾಮೀನು ಪಡೆದಿದ್ದಾರೆ. ಸುಳ್ಳು ದಾಖಲೆ ನೀಡಿ ಜಾಮೀನು ಪಡೆದಿರುವುದರಿಂದ ಜಾಮೀನು ರದ್ದುಗೊಳಿಸುವಂತೆ ಸಿಸಿಬಿ ಪೊಲೀಸರು ಮನವಿ ಮಾಡಿದ್ದರು.

loader