ತಿರುಪತಿ ತಿರುಮಲ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿರುವ ಹಿಂದುಯೇತರ ಉದ್ಯೋಗಿಗಳನ್ನು ತೆಗೆದುಹಾಕುವಂತಿಲ್ಲ ಹಾಗು ಕೋರ್ಟ್‌ನ ಮುಂದಿನ ಆದೇಶದವರೆಗೂ ಅದೇ ಸ್ಥಾನದಲ್ಲಿ ಮುಂದುವರೆಯಬೇಕು ಎಂದು ಹೈದರಾಬಾದ್‌ ಹೈಕೋರ್ಟ್‌ ಟಿಟಿಡಿಗೆ ಆದೇಶ ನೀಡಿದೆ.

ಹೈದರಾಬಾದ್‌: ತಿರುಪತಿ ತಿರುಮಲ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿರುವ ಹಿಂದುಯೇತರ ಉದ್ಯೋಗಿಗಳನ್ನು ತೆಗೆದುಹಾಕುವಂತಿಲ್ಲ ಹಾಗು ಕೋರ್ಟ್‌ನ ಮುಂದಿನ ಆದೇಶದವರೆಗೂ ಅದೇ ಸ್ಥಾನದಲ್ಲಿ ಮುಂದುವರೆಯಬೇಕು ಎಂದು ಹೈದರಾಬಾದ್‌ ಹೈಕೋರ್ಟ್‌ ಟಿಟಿಡಿಗೆ ಆದೇಶ ನೀಡಿದೆ.

ಈ ಮೊದಲು ದೇವಸ್ಥಾನದಲ್ಲಿ ಕೆಲಸ ಮಾಡುತ್ತಿರುವ ಮುಸ್ಲಿಂ ಮತ್ತು ಕ್ರೈಸ್ತ ಉದ್ಯೋಗಿಗಳನ್ನು ಸರ್ಕಾರದ ಇತರ ಇಲಾಖೆಗಳಿಗೆ ವರ್ಗಾಯಿಸುವುದಾಗಿ ಟಿಟಿಡಿ ಶೋಕಾಸ್‌ ನೀಡಿದ್ದರ ವಿರುದ್ಧ ಹಿಂದುಯೇತರ ಉದ್ಯೋಗಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು.

ಟಿಟಿಡಿಯ ಉಪಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲತಾ ಅವರು ಚಚ್‌ರ್‍ನಲ್ಲಿ ಪ್ರಾರ್ಥನೆ ಸಲ್ಲಿರುತ್ತಿರುವ ವಿಡಿಯೋ ವೈರಲ್‌ ಆದ ನಂತರದಲ್ಲಿ ಟಿಟಿಡಿ ಈ ನಿರ್ಣಕ್ಕೆ ಬಂದಿತ್ತು.