ಕಳೆದ 17 ದಿನಗಳಿಂದ ರಾಜ್ಯದಲ್ಲಿ ರಾಜಕೀಯ ತೂಗುಯ್ಯಾಲೆ ನಡೆಯುತ್ತಿದ್ದರೂ ಅಮಿತ್‌ ಶಾ, ‘ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ರಾಜ್ಯಪಾಲರನ್ನು ಮಧ್ಯಪ್ರವೇಶ ಮಾಡಿಸಿ ಸಂವಿಧಾನದ 356ನೇ ವಿಧಿ ಬಳಕೆ ಮಾಡೋದಿಲ್ಲ. ಎಷ್ಟೇ ದಿನ ಆಗಲಿ, ಸ್ಥಳೀಯ ಪಾಲಿಟಿಕ್ಸ್‌ನಿಂದ ಬೇಕಾದರೆ ಸರ್ಕಾರ ಬೀಳಲಿ. ಆದರೆ ರಾಷ್ಟ್ರಪತಿ ಶಾಸನ ಹೇರೋದು ಬೇಡ ಎಂದು ಸ್ಟ್ರಿಕ್ಟ್ ಆಗಿ ಹೇಳಿದ್ದರಂತೆ. 

ರಾಜೀನಾಮೆ ಜೇಬಲ್ಲಿಟ್ಟುಕೊಂಡು ಬಂದಿದ್ದ ಸ್ಪೀಕರ್ ರಮೇಶ್ ಕುಮಾರ್!

ಇದರಿಂದ ಕಾಂಗ್ರೆಸ್‌ಗೆ ಹೊಸ ಮೋದಿ ಸರ್ಕಾರದ ಮೇಲೆ ಬೀಳಲು ಒಂದು ಹ್ಯಾಂಡಲ್ ಸಿಕ್ಕಂತೆ ಆಗುತ್ತದೆ. ಅದು ಸಾಧ್ಯವಿಲ್ಲ. ಸ್ಥಳೀಯವಾಗಿ ನೋಡಿಕೊಳ್ಳಿ’ ಎಂದು ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರಿಗೆ ಸ್ಪಷ್ಟಪಡಿಸಿದ್ದರು. ಅಷ್ಟೇ ಅಲ್ಲ, ಕೇಂದ್ರದ ಯಾವುದೇ ಹಿರಿಯ ನಾಯಕರು ಬೆಂಗಳೂರಿನತ್ತ ಹಾಯಲೂ ಇಲ್ಲ. ಆದರೂ ಬಿಜೆಪಿಗೆ ದಕ್ಷಿಣದ ಹೆಬ್ಬಾಗಿಲು ಮತ್ತೆ ಕೈವಶವಾಗಿದೆ.

ಅತೃಪ್ತ ಶಾಸಕರ ಮುಂದಿನ ದಾರಿ ಏನು?

ಬಿಜೆಪಿ ಜತೆ ಸೇರಲು ಜೆಡಿಎಸ್‌ ಯತ್ನ!

ಒಂದು ಕಡೆ ಸರ್ಕಾರ ಅಲುಗಾಡುತ್ತಿದ್ದರೂ ದೇವೇಗೌಡರ ಕುಟುಂಬ ತನ್ನ ಕೊನೆ ಪ್ರಯತ್ನವೇನೋ ಎಂಬಂತೆ ದಿಲ್ಲಿಯ ಕಾಮನ್‌ ಫ್ರೆಂಡ್ಸ್‌ಗಳ ಮೂಲಕ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಲು ಯತ್ನಿಸಿತ್ತು. ಮುಖ್ಯವಾಗಿ ಗಡ್ಕರಿ, ರಾಜನಾಥ್‌, ಪಿಯೂಷ್‌ ಗೋಯಲ್ ಮೂಲಕ ಅಮಿತ್‌ ಶಾಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರೂ ಮೋದಿ ಮತ್ತು ಅಮಿತ್‌ ಶಾ ಒಪ್ಪಲಿಲ್ಲ. ಮೊದಲಾದರೆ ಬಿಜೆಪಿಗೆ ಒಕ್ಕಲಿಗ ಪ್ರದೇಶದಲ್ಲಿ ಆಸ್ತಿತ್ವ ಇರಲಿಲ್ಲ. ಆದರೆ ಈಗ ನಿಧಾನವಾಗಿ ಬಿಜೆಪಿಗೆ ಅಲ್ಲಿ ವೋಟು, ಸೀಟು ಎರಡೂ ಸಿಗುತ್ತಿದೆ. ‘ಈಗ ಮೈತ್ರಿ ಬೇಡವೇ ಬೇಡ’ ಎಂದು ಶಾ ಹೇಳಿದರೆ, ಪ್ರಧಾನಿ ಮೋದಿ, ‘ಗೌಡರ ಕುಟುಂಬ ನಂಬಲು ಸಾಧ್ಯವಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದ ನಂತರ ಬಾಗಿಲು ಹಾಕಲಾಯಿತಂತೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್’ ಕ್ಲಿಕ್ ಮಾಡಿ