ನನ್ನ ಮದುವೆಯಾಗುವವಳು ನನ್ನಿಬ್ಬರು ಸಹೋದರಿಯರನ್ನು ಒಪ್ಪಿಸಬೇಕು. ಯಾರು ಸಫಲರಾಗುತ್ತಾರೋ ಆಕೆಯೊಂದಿಗೆ ನನ್ನ ಜೀವನ ಸಾಗುತ್ತದೆ ಎಂದು ಬಿಲಾವಲ್ ವಿವಾಹದ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಇಸ್ಲಾಮಾಬಾದ್(ನ.06): ಪಾಕಿಸ್ತಾನದ ಪ್ರಮುಖ ಪ್ರತಿಪಕ್ಷ ನಾಯಕ ಬಿಲಾವಲ್ ಭುಟ್ಟೊ ಜರ್ದಾರಿಗೆ ಮದುವೆ ಪ್ರಸ್ತಾಪಗಳು ಬಂದಿವೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮ ಸಹೋದರಿಯರು ಸಮ್ಮತಿಯೊಂದಿಗೆ ಜೀವನ ಸಂಗಾತಿಯನ್ನು ಆಯ್ದುಕೊಳ್ಳುವುದಾಗಿ ಬಿಲಾವಲ್ ಹೇಳಿದ್ದಾರೆ.

ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರ ಪುತ್ರರಾಗಿರುವ ಬಿಲಾವಲ್, ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮುಖ್ಯಸ್ಥರೂ ಹೌದು. ನನ್ನ ಮುದುವೆಗೆ ಸಾಕಷ್ಟು ಪ್ರಸ್ತಾಪಗಳು ಬಂದಿವೆ. ನನ್ನ ಮದುವೆಯಾಗುವವಳು ನನ್ನಿಬ್ಬರು ಸಹೋದರಿಯರನ್ನು ಒಪ್ಪಿಸಬೇಕು. ಯಾರು ಸಫಲರಾಗುತ್ತಾರೋ ಆಕೆಯೊಂದಿಗೆ ನನ್ನ ಜೀವನ ಸಾಗುತ್ತದೆ ಎಂದು ಬಿಲಾವಲ್ ವಿವಾಹದ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.