‘ಬಾಲಿವುಡ್‌'ನ ಪ್ರಾರಂಭದ ದಿನಗಳಲ್ಲಿ ನನಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ನನಗೆ ಅನೇಕ ಬಾರಿ ಈ ರೀತಿಯ ಅನುಭವ ಆಗಿದೆ ಎಂದು ಇರ್ಫಾನ್ ಖಾನ್ ಹೇಳಿದ್ದಾರೆ.

ಮುಂಬೈ(ಅ.26): ಹಾಲಿವುಡ್‌'ನಲ್ಲಿ ಚಿತ್ರ ನಿರ್ಮಾಪಕ ಹಾರ್ವೆ ವೀನ್‌'ಸ್ಟೀನ್ ಹಲವು ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದು ಸುದ್ದಿಯಾಗಿರುವಾಗಲೇ, ಬಾಲಿವುಡ್‌'ನಲ್ಲಿಯೂ ಇದೇ ರೀತಿಯ ಸ್ಥಿತಿ ಇದೆ ಎಂದು ನಟ ಇರ್ಫಾನ್ ಖಾನ್ ಹೇಳಿಕೆ ನೀಡಿದ್ದಾರೆ. ಜೊತೆಗೆ ಸ್ವತಃ ತಾವೇ ಇಂಥ ಸ್ಥಿತಿ ಎದುರಿಸಿದ್ದಾಗಿ ಹೇಳಿದ್ದಾರೆ.

‘ಬಾಲಿವುಡ್‌'ನ ಪ್ರಾರಂಭದ ದಿನಗಳಲ್ಲಿ ನನಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ನನಗೆ ಅನೇಕ ಬಾರಿ ಈ ರೀತಿಯ ಅನುಭವ ಆಗಿದೆ ಎಂದು ಇರ್ಫಾನ್ ಖಾನ್ ಹೇಳಿದ್ದಾರೆ.

ಒಂದು ವೇಳೆ ನಾನು ಹೊಂದಾಣಿಕೆ ಮಾಡಿಕೊಳ್ಳಲು ಒಪ್ಪಿದರೆ ನನಗೆ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ, ಈಗ ಇದೆಲ್ಲಾ ನಡೆಯಲ್ಲ’ ಎಂದು ಹೇಳಿದ್ದಾರೆ.