ಸಿನೆಮಾ ದಂತಕಥೆ ಸೂಪರ್'ಸ್ಟಾರ್ ರಜಿನಿಕಾಂತ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಹ್ಯಾಟ್ಸಾಫ್. ಹೊಸ ಭಾರತ ಉದಯಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
ನವದೆಹಲಿ(ನ.09): ಕಪ್ಪುಹಣ ಹಾಗೂ ನಕಲಿ ನೋಟುಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ದಿಟ್ಟ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ತೆಗೆದುಕೊಂಡ ಈ ತೀರ್ಮಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಸಿನೆಮಾ ದಂತಕಥೆ ಸೂಪರ್'ಸ್ಟಾರ್ ರಜಿನಿಕಾಂತ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಹ್ಯಾಟ್ಸಾಫ್. ಹೊಸ ಭಾರತ ಉದಯಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
ರಜಿನಿ ಸೇರಿದಂತೆ ಪ್ರಕಾಶ್ ರಾಜ್, ಅನುಷ್ಕಾ ಶರ್ಮಾ, ರಿಷಿ ಕಪೂರ್ ಮುಂತಾದ ಸಿನೆಮಾ ತಾರೆಯರು ಮೋದಿಯ ಖಡಕ್ ನಿರ್ಣಯಕ್ಕೆ ಜೈ ಹೋ ಎಂದಿದ್ದಾರೆ.