Asianet Suvarna News Asianet Suvarna News

ರಾಹುಲ್ ಮಹಾಮೈತ್ರಿ ಬಗ್ಗೆ ನರೇಂದ್ರ ಮೋದಿ ಹೇಳಿದ್ದೇನು?

ನನ್ನನ್ನು ಸೋಲಿಸಬೇಕು ಎಂದು ಎಲ್ಲ ವಿಪಕ್ಷಗಳು ಒಂದಾಗಿದ್ದರೂ  ಅವರ ಆಸೆ ಕೈಗೂಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇತ್ತೀಚಿಗೆ ವಿಪಕ್ಷಗಳೆಲ್ಲ ಸೇರಿಕೊಂಡು ಮಹಾಮೈತ್ರಿ ಮಾಡಿಕೊಂಡಿದ್ದಕ್ಕೆ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.

Hatred for Modi is the sole gluing factor uniting Opposition: Prime Minister
  • Facebook
  • Twitter
  • Whatsapp

ನವದೆಹಲಿ[ಜೂ.3] 2019ರ ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಈಗಾಗಲೇ ತಯಾರಿ ಆರಂಭಿಸಿವೆ. ಆದರೆ ಸಮರ್ಥ ನಾಯಕತ್ವವಿಲ್ಲದೆ, ಸೂಕ್ತ ಗುರಿಯಿಲ್ಲದೆ ಇರುವುದರಿಂದ ಅವರ ಪ್ರಯತ್ನ ಸಫಲವಾಗುವುದಿಲ್ಲ. ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂದು ನಿಯತಕಾಲಿಕಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮೋದಿ ಫಿಟ್‌ನೆಸ್ ವಿಡಿಯೋಕ್ಕೆ 35 ಲಕ್ಷ ರೂ. ಖರ್ಚು..ನಿಜಾನಾ?

ಪ್ರಮುಖ ವಿಪಕ್ಷ ಕಾಂಗ್ರೆಸ್ ಲೋಕಸಭೆಯಲ್ಲಿ ತನ್ನ ಅಸ್ವಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಇನ್ನು ಮೈತ್ರಿ ಮಾಡಿಕೊಂಡ ನಂತರ ಅವರಲ್ಲಿ ಒಂದೇ ಅಭಿಪ್ರಾಯ ಮೂಡಲು ಸಾಧ್ಯವೇ ಇಲ್ಲ. ಎನ್ ಡಿಎ ಕುಟುಂಬವನ್ನು ಒಡೆಯಲು ಸಾಧ್ಯವಿಲ್ಲ ಎಂದು ಪರೋಕ್ಷ ಎಚ್ಚರಿಕೆಯನ್ನು ನೀಡಿದ್ದಾರೆ.

2019ರ ಲೋಕಸಭಾ ಚುನಾವಣೆಗೆ ಮುನ್ನವೂ ಮಧ್ಯಪ್ರದೇಶ ಸೇರಿದಂತೆ ಕೆಲ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇದೆಲ್ಲದರ ಫಲಿತಾಂಶ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುವ ಸಂಭವ ಇದ್ದು ಮೋದಿ ಮತ್ತು ಅಮಿತ್ ಶಾ ಈಗಾಗಲೇ ರಣತಂತ್ರ ಆರಂಭಿಸಿದ್ದಾರೆ.

Follow Us:
Download App:
  • android
  • ios