ನವದೆಹಲಿ[ಜು.2]  ಯೋಗ ದಿನಕ್ಕೂ ಮುನ್ನ ಉದ್ಯಾನವನವೊಂದರಲ್ಲಿ ಪ್ರಧಾನಿ ಮೋದಿ ಯೋಗಾಭ್ಯಾಸ ಮಾಡುವ ವಿಡಿಯೋವೊಂದನ್ನು ತಮ್ಮ ಟ್ವಿಟರ್ ಪೇಜ್ ಗೆ ಅಪ್ ಲೋಡ್ ಮಾಡಿದ್ದರು. ಈ ವಿಡಿಯೋ ವೈರಲ್  ಆಗಿತ್ತು. 

ಯೋಗ ದಿನಾಚರಣೆ ಜಾಹೀರಾತಿಗೆ ಕೇಂದ್ರ ಸರಕಾರ 20 ಕೋಟಿ ರೂ. ಖರ್ಚು ಮಾಡಿದ್ದರೆ, ಪ್ರಧಾನಿ ಫಿಟ್‌ನೆಸ್ ವೀಡಿಯೋಗೆ 35 ಲಕ್ಷ ರೂ. ವೆಚ್ಚಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಆರೋಪ ಮಾಡಿದ್ದರು.

ಆದರೆ ಇದಕ್ಕೆ ಉತ್ತರ ನೀಡಿರುವ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ಪ್ರಧಾನಿ ಮೋದಿ ಫಿಟ್ ನೆಸ್ ವಿಡಿಯೋಕ್ಕೆ ಹಣ ವೆಚ್ಚ ಮಾಡಲಾಗಿಲ್ಲ. ವಿಡಿಯೋವನ್ನು ಅವರ ವಿಡಿಯೋಗ್ರಾಫರ್ ಚಿತ್ರೀಕರಣ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಮೋದಿ ಫಿಟ್ ನೆಸ್ ವಿಡಿಯೋ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ.