ಬೇಲೂರು ತಾ‌.ಪಂ ಸದಸ್ಯ ನವಿಲಹಳ್ಳಿ ಕಿಟ್ಟಿ ಸಾವು ಪ್ರಕರಣ ತಿರುವು ಪಡೆದುಕೊಂಡಿದೆ.
ಹಾಸನ (ಫೆ.26): ಬೇಲೂರು ತಾ.ಪಂ ಸದಸ್ಯ ನವಿಲಹಳ್ಳಿ ಕಿಟ್ಟಿ ಸಾವು ಪ್ರಕರಣ ತಿರುವು ಪಡೆದುಕೊಂಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮೃತಪಟ್ಟ ಬಿಜೆಪಿ ತಾ.ಪಂ ಸದಸ್ಯ ಕಿಟ್ಟಿಯದು ಕೊಲೆಯಲ್ಲ, ಸಹಜ ಸಾವು. ವಿದ್ಯುತ್ ಶಾಕ್’ನಿಂದ ಸಾವು ಎಂದು ಮರಣೋತ್ತರ ಪರೀಕ್ಷೆ ವೇಳೆ ಸಾಬೀತಾಗಿದೆ.
ಮನೆ ಕಟ್ಟುತ್ತಿರುವ ಕಿಟ್ಟಿ, ಟಿಪ್ಪರ್’ನಲ್ಲಿ ಮರಳು ತರಲು ಹೋಗಿದ್ದಾಗ ಟಿಪ್ಪರ್ ಹೂತು ಹೋಗಿತ್ತು. ಅದನ್ನು ಮೇಲೆತ್ತುವಾಗ ಕರೆಂಟ್ ಶಾಕ್’ನಿಂದ ಕಿಟ್ಟಿ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ಹೇಳಿದೆ.
