ಹಾಸನ (ಜು.21): ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಪ್ರಥಮ ಬಾರಿಗೆ ಜೆಡಿಎಸ್‌ನಿಂದ ಆಯ್ಕೆಯಾಗಿರುವ ಪ್ರಜ್ವಲ್‌ ರೇವಣ್ಣ ಅವರು ಜೂ.21ರಂದು ಶುಕ್ರವಾರ ಸಂಸದರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಸರಿಯಾಗಿ ಲೋಕಸಭೆ ಸ್ವೀಕರ್‌ ಅವರಿಂದ ಸಂಸತ್ತಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸುವರು.

ಮೊದಲ ಬಾರಿಗೆ ಸಂಸತ್‌ ಪ್ರವೇಶಿಸುತ್ತಿರುವ ಪುತ್ರನ ಪ್ರಮಾಣವಚನ ಕಾರ್ಯಕ್ರಮದ ವೇಳೆ ತಂದೆ, ಲೋಕೋಪಯೋಗಿ ಇಲಾಖೆ ಸಚಿವ ಎಚ್‌.ಡಿ.ರೇವಣ್ಣ ಹಾಗೂ ತಾಯಿ ಜಿಪಂ ಸದಸ್ಯೆ ಭವಾನಿ ರೇವಣ್ಣ, ಸಹೋದರ ಸೂರಜ್‌ ರೇವಣ್ಣ ಮತ್ತು ಅತ್ತಿಗೆ ಸಾಗರಿಕ ಲೋಕಸಭಾ ಗ್ಯಾಲರಿಯಲ್ಲಿದ್ದು, ಈ ಸಂದರ್ಭಕ್ಕೆ ಸಾಕ್ಷಿಯಾಗಲಿದ್ದಾರೆ. ರಾಜ್ಯದ ಎಲ್ಲ 28 ಸಂಸದರು ಜೂ.17ರಂದೇ ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, ಪ್ರಜ್ವಲ್‌ ರೇವಣ್ಣ ಮಾತ್ರ ಆ ವೇಳೆ ಗೈರಾಗಿದ್ದರು.

ಸಂಸದ ರೇವಣ್ಣಗೆ ಎದುರಾಯ್ತು ಸಂಕಷ್ಟ

ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಗೈರಾಗಿದ್ದರು ಎಂದು ಹೇಳಲಾಗಿತ್ತು. ಆದರೆ, ಪ್ರತಿಯೊಂದಕ್ಕೂ ಭವಿಷ್ಯ ಕೇಳುವ ಸಚಿವ ರೇವಣ್ಣ ಅವರು ಪುತ್ರನ ಪ್ರಮಾಣ ವಚನ ವಿಚಾರದಲ್ಲೂ ಅಳೆದು, ತೂಗಿ ಈ ಸಮಯ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಸಂಸದರಾದರೇನು ಮಡದಿ ಮಾತು ಮೀರುತ್ತಾರೆಯೇ ಸಿಂಹ?

"