ಈ ಗ್ರೂಪ್​'ನಲ್ಲಿ ಮಹಿಳಾ ವೈದ್ಯರು, ಕಿರಿಯ ಮಹಿಳಾ ವೈದ್ಯರು  ಸೇರಿದಂತೆ ಮೆಡಿಕಲ್​ ವಿದ್ಯಾರ್ಥಿಗಳೂ ಇದ್ದರು. ಅಂತಹ ಗ್ರೂಪ್'​ಗೆ ವೈದ್ಯ ಡಾ.ಸುರೇಶ್​ ಅಶ್ಲೀಲ ದೃಶ್ಯ ಹರಿಬಿಟ್ಟಿದ್ದರು.

ಹಾಸನ(ಜ. 17): ಇಲ್ಲಿಯ ಹಿಮ್ಸ್​ ಕಾಲೇಜಿನ ವೈದ್ಯರೊಬ್ಬರು ತಮ್ಮ ಸಂಸ್ಥೆಯ ಅಧಿಕೃತ ವಾಟ್ಸಾಪ್​ ಗ್ರೂಪ್'​ನಲ್ಲಿ ಅಶ್ಲೀಲ ದೃಶ್ಯವನ್ನು ಹರಿಬಿಟ್ಟು ಎಡವಟ್ಟು ಮಾಡಿಕೊಂಡಿದ್ದಾರೆ. ಡಾ. ಸುರೇಶ್​ ಎಡವಟ್ಟು ಮಾಡಿಕೊಂಡಿರೋ ವೈದ್ಯ.

ಹಿಮ್ಸ್​ ಸಂಸ್ಥೆಯ (HIMSTA) ಹೆಸರಿನಲ್ಲಿ ಅಧಿಕೃತ​ ವಾಟ್ಸಾಟ್​ ಗ್ರೂಪ್​ ತೆರೆಯಲಾಗಿತ್ತು. ಈ ಗ್ರೂಪ್​'ನಲ್ಲಿ ಮಹಿಳಾ ವೈದ್ಯರು, ಕಿರಿಯ ಮಹಿಳಾ ವೈದ್ಯರು ಸೇರಿದಂತೆ ಮೆಡಿಕಲ್​ ವಿದ್ಯಾರ್ಥಿಗಳೂ ಇದ್ದರು. ಅಂತಹ ಗ್ರೂಪ್'​ಗೆ ವೈದ್ಯ ಡಾ.ಸುರೇಶ್​ ಅಶ್ಲೀಲ ದೃಶ್ಯ ಹರಿಬಿಟ್ಟಿದ್ದರು. ಈ ವಿಡಿಯೋ ನೋಡಿದ ಗ್ರೂಪ್'​ನಲ್ಲಿದ್ದ ಮಹಿಳಾ ಸಹಾಯಕ ಪ್ರಾಧ್ಯಾಪಕರು ಹಿಮ್ಸ್​ ನಿರ್ದೇಶಶಕರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ಡಾ. ಸುರೇಶ್'ಗೆ ನೋಟೀಸ್​ ಜಾರಿ ಮಾಡಿ ವಿವರಣೆ ಕೋರಿದ್ದಾರೆ. ವಿವರಣೆ ಪಡೆದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹಿಮ್ಸ್ ನಿರ್ದೇಶಕ ಡಾ.ರವಿಕುಮಾರ್​ ತಿಳಿಸಿದ್ದಾರೆ.

- ಹರೀಶ್, ಸುವರ್ಣನ್ಯೂಸ್, ಹಾಸನ