Asianet Suvarna News Asianet Suvarna News

ಹಾಸನ ಡಿಸಿ ರೋಹಿಣಿ ಸಿಂಧೂರಿಯಿಂದ ಎ.ಮಂಜು ಕಚೇರಿಗೆ ಬೀಗ

ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಹಾಗೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಹಗ್ಗ ಜಗ್ಗಾಟದಿಂದ, ಸರಕಾರ ಡಿಸಿಯನ್ನು ವರ್ಗಾವಣೆ ಮಾಡಿತ್ತು. ಅವಧಿಗೂ ಮುನ್ನವೇ ವರ್ಗಾವಣೆಯಾಗಿದ್ದಕ್ಕೆ ಕೋರ್ಟ್ ಮೆಟ್ಟಿಲೇರಿದ ರೋಹಿಣಿ, ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು. 

Hassan dc Rohini Sindhuri locks district in charge minister office

ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಹಾಗೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಹಗ್ಗ ಜಗ್ಗಾಟದಿಂದ, ಸರಕಾರ ಡಿಸಿಯನ್ನು ವರ್ಗಾವಣೆ ಮಾಡಿತ್ತು. ಅವಧಿಗೂ ಮುನ್ನವೇ ವರ್ಗಾವಣೆಯಾಗಿದ್ದಕ್ಕೆ ಕೋರ್ಟ್ ಮೆಟ್ಟಿಲೇರಿದ ರೋಹಿಣಿ, ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು. 

ಇದೀಗ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಸರಕಾರಿ ಕಚೇರಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಹಾಸನ ಡಿಸಿ ಬೀಗ ಹಾಕಿದ್ದಾರೆ!

ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಹಾಸನ ಉಸ್ತುವಾರಿ ಸಚಿವ ಎ.ಮಂಜು ಅವರ ಕಡೆಯವರು ಸರಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎಷ್ಟೇ ಪ್ರಯತ್ನ ಮಾಡಿದರೂ ಕಚೇರಿ ಬಾಗಿಲು ತೆಗೆಯಲಿಲ್ಲ. ಕೊನೆಗೆ ಸಚಿವರ ಕಚೇರಿ ವಶಕ್ಕೆ ಪಡೆಯುವಂತೆ ಡಿಸಿ ರೋಹಿಣಿ ಆದೇಶಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಹಾಯಕ ಜಿಲ್ಲಾ ಚುನಾವಣಾಧಿಕಾರಿ ನೋಟೀಸ್ ಜಾರಿಗೊಳಿಸಿದ್ದು, ನೀತಿ ಸಂಹಿತೆ ಜಾರಿ ಬಳಿಕ ಸರ್ಕಾರಿ ಕಟ್ಟಡ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿದೆ.

ಖಾಸಗಿ ವ್ಯಕ್ತಿಗಳಿಂದ ಸರ್ಕಾರಿ ಕಟ್ಟಡದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕಾರ್ಯನಿರ್ವಹಣೆ ಬಗ್ಗೆ ನೋಟೀಸ್ ಜಾರಿಗೊಳಿಸಲಾಗಿದೆ. ಸಹಾಯಕ ಜಿಲ್ಲಾ ಚುನಾವಣಾ ಅಧಿಕಾರಿ ಪೂರ್ಣಿಮಾ, ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿದ್ದಾರೆ.

ಕಚೇರಿ ಒಳಗಿದ್ದವರ ವಿರುದ್ದ ದೂರು‌ ದಾಖಲಿಸಲು ಸಹಾಯಕ ಜಿಲ್ಲಾ ಚುನಾವಣಾಧಿಕಾರಿ ಸೂಚಿಸಿದ್ದಾರೆ.  ಚುನಾವಣೆ ಘೋಷಣೆ ಬಳಿಕವೂ ಸರ್ಕಾರಿ ಕಟ್ಟಡವನ್ನ ರಾಜಕೀಯ ವ್ಯಕ್ತಿಗಳಿಗೆ ಬಿಟ್ಟುಕೊಟ್ಟ ಬಗ್ಗೆ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡಿದ್ದು, ಏಪ್ರಿಲ್‌ 2ರೊಳಗೆ ಉತ್ತರಿಸಲು ಹೇಳಲಾಗಿದೆ. 
 

Follow Us:
Download App:
  • android
  • ios